ಹೊಸದಿಗಂತ ಡಿಜಿಟಲ್ ಡೆಸ್ಕ್ :
ಆರ್‌ಸಿಬಿ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ಜಗ್ಗದ ಮುಂಬೈ ಇಂಡಿಯನ್ಸ್ 7 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗಾಗಿ 172 ರನ್ ಟಾರ್ಗೆಟ್ ಪಡೆದಿದೆ.
ಮುಂಬೈ ಇಂಡಿಯನ್ಸ್ ಪರ ತಿಲಕ ವರ್ಮಾ ಏಕಾಂಗಿ ಹೋರಾಟದ ಪರಿಣಾಮ ಮುಂಬೈ ಇಂಡಿಯನ್ಸ್ ಉತ್ತಮ ಟಾರ್ಗೆಟ್ ಕಲೆಹಾಕಿತು.
ಇನ್ನಿಂಗ್ಸ್ ಆರಂಭಿಸಿದ ಬೆನ್ನಲ್ಲೇ ಇಶಾನ್ ಕಿಶನ್ 10 ರನ್ ಸಿಡಿಸಿ ಔಟಾದರು. ಇತ್ತ ಕ್ಯಾಮರೂನ್ ಗ್ರೀನ್ 5 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ನಾಯಕ ರೋಹಿತ್ 10 ಎಸೆತ ಎದುರಿಸಿ ಕೇವಲ 1 ರನ್ ಸಿಡಿಸಿ ಔಟಾದರು.
ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಜೊತೆಯಾಟ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾಯಿತು. ಆದರೆ ಸೂರ್ಯಕುಮಾರ್ ಯಾದವ್ 15 ರನ್ ಸಿಡಿಸಿ ಔಟಾದರು. ಆದರೆ ತಿಲಕ್ ವರ್ಮಾ ಏಕಾಂಗಿ ಹೋರಾಟ ನೀಡಿದರು. ನೆಹಾಲ್ ವಧೇರಾ 21 ರನ್ ಸಿಡಿಸಿ ಔಟಾದರು.
ತಿಲಕ್ ವರ್ಮಾ ಹಾಫ್ ಸೆಂಚುರಿ ಸಿಡಿಸಿ ಆಸರೆಯಾದರು.ಟಿಮ್ ಡೇವಿಡ್ ಕೇವಲ 4 ರನ್ ಸಿಡಿಸಿ ಔಟಾದರು.ಹೃತಿಕ್ ಶೋಕಿನ್ 5 ರನ್ ಸಿಡಿಸಿ ನಿರ್ಗಮಿಸಿದರು.ಆದರೆ ತಿಲಕ್ ವರ್ಮಾ ಮುಂಬೈ ತಂಡದ ಕೈಹಿಡಿದರು.
ಅಂತಿಮ ಹಂತದಲ್ಲಿ ಅರ್ಶದ್ ಖಾನ್ ಉತ್ತಮ ಸಾಥ್ ನೀಡಿದರು. ಇತ್ತ ತಿಲಕ್ ವರ್ಮಾ 46 ಎಸೆತದಲ್ಲಿ ಅಜೇಯ 84 ರನ್ ಸಿಡಿಸಿದರೆ. ಅರ್ಶದ್ ಖಾನ್ ಅಜೇಯ 15 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 7 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸಿತು.