ಜೀವನದಲ್ಲಿ ನೆಗೆಟಿವ್ ಕಮೆಂಟ್‌ಗಳನ್ನು ಯಾರು ಪಡೆದುಕೊಳ್ಳೋದಿಲ್ಲ ಹೇಳಿ, ಕೆಲವೊಮ್ಮೆ ಅದು ನಿಜವಾಗಿದ್ದು ಹೇಳುವ ರೀತಿ ಕೆಟ್ಟದಾಗಿರಬಹುದು, ಇನ್ನು ಕೆಲವೊಮ್ಮೆ ಮನಸ್ಸಿಗೆ ನೋವು ಮಾಡಲೆಂದೇ ನೆಗೆಟಿವ್ ಕಮೆಂಟ್ಸ್ ಮಾಡಬಹುದು. ಇದನ್ನು ಹಲವರು ಈಸಿಯಾಗಿ ತೆಗೆದುಕೊಂಡು ಮರೆತುಹೋಗೋದಿಲ್ಲ. ಕೆಲವರು ಮಾತ್ರ ಅದನ್ನು ಅಲ್ಲೇ ಬಿಟ್ಟು ಮುಂದೆ ಹೋಗ್ತಾರೆ.. ಈ ಹಲವರಿಂದ ನೀವು ಕೆಲವರ ಲಿಸ್ಟ್‌ಗೆ ಬರಬೇಕಾದ್ರೆ ಈ ಅಂಶಗಳನ್ನು ನೆನಪಿನಲ್ಲಿಡಿ…
ಭಾವನೆಗಳನ್ನು ಮಿಕ್ಸ್ ಮಾಡಬೇಡಿ
ನೆಗೆಟಿವ್ ಕಮೆಂಟ್‌ಗಳನ್ನು ಪಡೆದುಕೊಂಡವರಿಗೆ ಭಾವನೆಗಳನ್ನು ಮಿಕ್ಸ್ ಮಾಡದೇ ಇರೋದು ತುಂಬಾನೇ ಕಷ್ಟ. ಸಿಟ್ಟು ಬರಬಹುದು, ಅಳು ಬರಬಹುದು, ಮನಸ್ಸಿಗೆ ತುಂಬಾ ನೋವಾಗಬಹುದು. ಇದರಲ್ಲಿ ಯಾವುದೇ ಒಂದು ಭಾವನೆ ನಿಮ್ಮದಾಗಿದ್ದರೂ ಆ ಕ್ಷಣಕ್ಕೆ ಉತ್ತರ ಕೊಡೋದು ಬೇಡ ಸುಮ್ಮನಾಗಿಬಿಡಿ.
ನೀವು ಅವರು ಹೇಳಿದ ವ್ಯಕ್ತಿ ಅಲ್ವಾ?
ನೀವು ಅವರು ಹೇಳಿದ ರೀತಿ ವ್ಯಕ್ತಿ ಅಲ್ವಾ? ಮತ್ಯಾಕೆ ವರಿ ಮಾಡ್ತೀರಿ? ನೀನು ಸೋಮಾರಿ ಕೆಲಸ ಮಾಡೋದಿಲ್ಲ ಎಂದು ಹೇಳಿ ಮೂದಲಿಸಬಹುದು ಆದರೆ ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಗೊತ್ತಿದೆಯಲ್ಲಾ? ಅವರಿವರ ಮಾತಿಗೆ ಸೊಪ್ಪು ಯಾಕೆ ಹಾಕ್ತೀರಿ, ಅವರ ಮಾತಿಗೆ ನೀವು ಬೆಲೆ ಕೊಡದೇ ಹೋದ್ರೆ ಅದೇ ಬೆಸ್ಟ್ ರಿಯಾಕ್ಷನ್.
ಪದಬಳಕೆ ಸರಿಯಿರಲಿ
ಸಿಟ್ಟಲ್ಲಿದ್ದೀರಿ ಎಂದೋ ನಮಗೆ ನೋಯಿಸಿದ ವ್ಯಕ್ತಿಗೆ ನಿಂದಿಸುವ ಸಲುವಾಗಿ ಬಾಯಿಗೆ ಬಂದದನ್ನು ಮಾತನಾಡಬೇಡಿ. ಮಾತು ಆಡಿದರೆ ಮುಗಿದು ಹೋಯ್ತು ನೆನಪಿರಲಿ.
ಪರ್ಸನಲ್ ಆಗಿ ತಗೋಬೇಡಿ
ಅವರ ಜೀವನದಲ್ಲಿ ಏನೋ ನೋವು, ಕುಂದು ಕೊರತೆ ಇರೋ ವ್ಯಕ್ತಿಗಳು ಮಾತ್ರ ಬೇರೆಯವರನ್ನು ನೋಯಿಸುವ ಕಮೆಂಟ್ ಮಾಡೋದು. ಇವರನ್ನು ಗಂಭೀರವಾಗಿ ತಗೋಳೋದ್ಯಾಕೆ? ಅಯ್ಯೋ ಪಾಪ ಎಂದು ಅವರ ಮೇಲೆ ಕರುಣೆ ತೋರಿಸಿ ಸುಮ್ಮನಾಗಿದೆ.
ಬರೀ ಕಮೆಂಟ್ ಆ ಅಥವಾ ಸತ್ಯಾನಾ?
ಅವರು ಹೇಳಿದ ಕಮೆಂಟ್ ನಿಮಗೆ ಅಷ್ಟು ನೋವಾಯ್ತು ಎಂದರೆ ಅದರ ಬಗ್ಗೆ ನೀವು ಆಲೋಚಿಸಲೇಬೇಕು. ಅವರ ಮಾತಿನಲ್ಲಿ ಸ್ವಲ್ಪವಾದ್ರೂ ಸತ್ಯ ಇದ್ಯಾ? ನೀವು ಏನನ್ನಾದರೂ ಬದಲಾಯಿಸಿಕೊಳ್ಳಬೇಕಾ? ಆಲೋಚನೆ ಮಾಡಿ.
ಅದೇ ವಿಷಯ ಎಲ್ಲರ ಹತ್ರ ಹೇಳ್ಕೋಬೇಡಿ
ಕೆಲವರಿಗೆ ನನಗೆ ಹೀಗಾಯ್ತು ಎಂದು ಹೇಳಿಕೊಂಡು ಓಡಾಡೋ ಅಭ್ಯಾಸ. ಆಫೀಸ್‌ನಲ್ಲಿ ಮ್ಯಾನೇಜರ್ ಬೈದಿದ್ದಾರೆ ಎಂದಾದರೆ ನೀವು ಹಗುರಾಗೋಕೆ ಅದನ್ನು ಹತ್ತು ಜನರ ಬಳಿ ಹೇಳ್ತೀರಿ. ಅವರೆಲ್ಲರೂ ನಿಮ್ಮ ಸಮಾಧಾನಕ್ಕೆ ಬಾಸ್ ಬೈದು, ನೀವೇ ಸರಿ ಎನ್ನಬಹುದು. ಹತ್ತರಲ್ಲಿ ಒಬ್ಬರಾದ್ರೂ ಬಾಸ್ ಪರವಾಗಿರೋದಿಲ್ವಾ?
ಅಲ್ಲಿಂದ ಹೊರಡೋ ಸಮಯ ಬಂತಾ?
ಕೆಲಸವೇ ಆಗಿರಲಿ, ಸಂಬಂಧವೇ ಆಗಿರಲಿ ಬರೀ ನೆಗೆಟಿವ್ ಕಮೆಂಟ್‌ಗಳೇ ಬರುತ್ತಿದೆ ಎಂದಾದರೆ ನೀವು ಕೈಲಾದಷ್ಟು ಟ್ರೈ ಮಾಡಿ. ಆದರೆ ಯಾವ ಸಂದರ್ಭವೂ ಸಹಾಯಕ್ಕೆ ಬರ‍್ತಿಲ್ಲ ಎಂದರೆ ಅಲ್ಲಿಂದ ದೂರ ಹೋಗುವುದು ಒಳಿತು.
ಯಾರದ್ದೋ ಮಾತಿಂದ ನಿಮ್ಮ ದಿನ ಹಾಳಾಗೋದ್ಯಾಕೆ?
ಯಾರದ್ದೂ ಮಾತಿನಿಂದ ನಿಮ್ಮ ಇಡೀ ದಿನ ಹಾಳಾಗೋದ್ಯಾಕೆ? ಮನೆಯಲ್ಲಿ ಯಾರೋ ದೂರದ ಕಸಿನ್ ನೆಗೆಟಿವ್ ಕಮೆಂಟ್‌ನಿಂದ ವರ್ಷಗಳ ನಂತರ ಸಿಕ್ತಿರೋ ನಿಮ್ಮ ಸ್ನೇಹಿತೆಯ ಮೂಡ್‌ನ್ನೂ ಹಾಳು ಮಾಡ್ತೀರಾ? ನಿಮ್ಮ ದಿನ ನಿಮ್ಮ ಖುಷಿ ನಿಮ್ಮ ಕೈಯಲ್ಲಿರಲಿ.