ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮಾಧ್ಯಮಗಳು ಸಾಕಷ್ಟು ಪ್ರಬಲವಾಗಿವೆ. ಜಾಗತಿಕವಾಗಿ ತನ್ನ ಛಾಪು ಮೂಡಿಸುವ ಎಲ್ಲ ಸಾಮರ್ಥ್ಯ ಹೊಂದಿವೆ ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಕೆಲ ವಿದೇಶಿ ಮಾಧ್ಯಮಗಳು ದೇಶದಲ್ಲಿನ ಕೋವಿಡ್-19 ನಿರ್ವಹಣೆ ಬಗ್ಗೆ ತಪ್ಪು ಸುದ್ದಿಗಳನ್ನು ಹಬ್ಬಿಸಿ, ದೇಶದ ಪ್ರತಿಷ್ಠೆ ಹಾಳು ಮಾಡುವ ಕೆಲಸ ಮಾಡಿವೆ. ಇದು ಬರೀ ಹೊರಗಿನ ಕೆಲಸ ಅಲ್ಲ, ಈ ವಿಷಯದಲ್ಲಿ ದೇಶದೊಳಗಿ ಕೆಲವು ನಾಯಕರ ಆಸಕ್ತಿಯೂ ಇದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಈ ಹಿಂದೆ ಮಾಧ್ಯಮ ಸ್ವಾತಂತ್ರವಾಗಿತ್ತು, ಈಗಲೂ ಇದೆ, ಮುಂದೆಯೂ ಇರಲಿದೆ. ಕೆಲವು ಪಕ್ಷಗಳು ತಮ್ಮ ಬಜೆಟ್‌ನ ಹೆಚ್ಚಿನ ಪ್ರಮಾಣವನ್ನು ಜನಪರ ಯೋಜನೆಗಳ ಮೇಲೆ ವ್ಯಯಿಸುವ ಬದಲು ಮಾಧ್ಯಮಗಳ ಮೇಲೆ ವ್ಯಯಿಸುತ್ತಿದೆ. ಸ್ವಯಂ ಪ್ರಶಂಸೆಗಾಗಿ ಮಾಧ್ಯಮಗಳನ್ನು ಬಳಸುತ್ತಿದೆ. ಒಂದೇ ಬಾರಿ ಏಳೆಂಟು ಪತ್ರಿಕೆ ಒಂದೇ ರೀತಿ ಹೆಡ್ಡಿಂಗ್ ಹಾಕಿರುತ್ತಾರೆ ಎಂದರೆ ಏನರ್ಥ? ಇದು ದಿನವೂ ನಡೆಯುವ ಸಂಗತಿಯೇ ಎಂದಿದ್ದಾರೆ.