ನಟಿ ನಗ್ಮಾ ಜೊತೆ ಸಂಬಂಧ: ಮೌನ ಮುರಿದ ನಟ ರವಿ ಕಿಶನ್!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ನಟ ಮತ್ತು ರಾಜಕಾರಣಿ ರವಿ ಕಿಶನ್ ಇತ್ತೀಚಿಗ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರಲ್ಲಿ ಮಾಜಿ ಸಹನಟಿ ನಗ್ಮಾ ಅವರೊಂದಿಗಿನ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.

ನಟಿ ನಗ್ಮಾ ಮತ್ತು ರವಿ ಕಿಶನ್ ನಡುವೆ ಸಂಬಂಧವಿದೆ ಎನ್ನುವ ಸುದ್ದಿ ಅನೇಕ ಸಮಯದಿಂದ ಕೇಳಿ ಬರುತ್ತಿತ್ತು. ಈ ಬಗ್ಗೆ ಇಬ್ಬರಲ್ಲಿ ಯೂರು ಕೂಡ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಮೊದಲ ಬಾರಿಗೆ ರವಿ ಕಿಶನ್ ಮೌನ ಮುರಿದಿದ್ದಾರೆ.

ಇಬ್ಬರೂ ಹೆಚ್ಚು ಸಿನಿಮಾ ಮಾಡಿದ್ದರಿಂದ ಈ ರೀತಿಯ ವಿವಾದ ಶುರುವಾಗಿದೆ . ‘ನಮ್ಮ ಚಿತ್ರಗಳು ಬ್ಲಾಕ್‌ಬಸ್ಟರ್ ಆಗಿದ್ದರಿಂದ ನಾವು ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದೆವು. ನಾವು ಉತ್ತಮ ಸ್ನೇಹಿತರಾಗಿದ್ದೇವೆ ಮತ್ತು ಮುಖ್ಯವಾಗಿ ನಾನು ಮದುವೆಯಾಗಿದ್ದೇನೆ ಎಂದು ಎಲ್ಲರಿಗೂ ತಿಳಿದಿತ್ತು. ನಾನು ನನ್ನ ಹೆಂಡತಿ ಪ್ರೀತಿ ಶುಕ್ಲಾಳನ್ನು ಗೌರವಿಸುತ್ತೇನೆ ಮತ್ತು ಹೆದರುತ್ತೇನೆ. ನಾನು ಅವಳ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತೇನೆ ಎಂದು ಈ ಮೊದಲು ಬಹಿರಂಗಪಡಿಸಿದ್ದೇನೆ. ನನ್ನ ಹೆಂಡತಿ ಮೊದಲಿನಿಂದಲೂ ನನ್ನೊಂದಿಗೆ ಇದ್ದಳು ಮತ್ತು ನನ್ನ ಬಳಿ ಹಣವಿಲ್ಲದಿರುವಾಗಲೂ ಅವಳು ನನ್ನೊಂದಿಗೆ ಇದ್ದಳು’ ಎಂದು ಹೇಳಿದ್ದಾರೆ.

ಸಿನಿಮಾಗಳು ಹಿಟ್ ಆದ ನಂತರ ನಾನು ಅಹಂಕಾರಿಯಾಗಿದ್ದೆ. ಬಿಗ್ ಬಾಸ್ ಗೆ ಸೇರುವಂತೆ ನನ್ನ ಪತ್ನಿ ಸಲಹೆ ನೀಡಿದಳು. ನಾನು ಬಿಗ್ ಬಾಸ್‌ಗೆ ಹೋದೆ. ಮೂರು ತಿಂಗಳ ಕಾಲ ಒಳಗಿದ್ದು ನಾನು ಹೊರಗೆ ಬಂದಾಗ ನಾನು ಸಾಕಷ್ಟು ಬದಲಾಗಿದ್ದೆ. ನಾನು ಜನಪ್ರಿಯನಾಗುವುದು ಮಾತ್ರವಲ್ಲ, ನಾನು ಸಾಮಾನ್ಯ ವ್ಯಕ್ತಿಯಾಗಿದ್ದೇನೆ. ಆ ಅವಧಿಯಲ್ಲಿ ನಾನು ನನ್ನ ಕುಟುಂಬ, ನನ್ನ ಹೆಂಡತಿ ಮತ್ತು ಮಕ್ಕಳನ್ನು ಮಿಸ್ ಮಾಡಿಕೊಂಡೆ’ ಎಂದು ಹೇಳಿದ್ದಾರೆ.

ನಟಿ ನಗ್ಮಾ ಕೂಡ ರವಿ ಕಿಶನ್ ಜೊತೆಗಿನ ಅಫೇರ್ ವದಂತಿ ಬಗ್ಗೆ  ಪ್ರತಿಕ್ರಿಯೆ ನೀಡಿದ್ದರು. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಗ್ಮಾ, ಒಬ್ಬ ಸಹ ನಟನ ಜೊತೆ ಉತ್ತಮ ಬಾಂಧವ್ಯ ಹೊಂದಲು ಯಾಕೆ ಸಾಧ್ಯವಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ನಾವು ಆರಾಮಾಗಿ ಇದ್ದರೆ ಏನು ತಪ್ಪು. ರೀಲ್ ಮೇಲೆ ನಾವು ಗಂಡ-ಹೆಂಡತಿ, ಪ್ರೇಮಿಗಳಾಗಿ ನಟಿಸುತ್ತೇವೆ. ಹಾಗಾಗಿ ತೆರೆಹಿಂದೆ ಸ್ವಲ್ಪ ಅರಾಮಾಗಿ ಇರಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!