ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಗೇಟ್ ವೇ ಆಫ್ ಇಂಡಿಯಾದ ಮೇಲ್ಮೈನಲ್ಲಿ ಕೆಲವು ಬಿರುಕುಗಳು ಮೂಡಿವೆ. ಪರಿಶೀಲನೆ ವೇಳೆ ಬಿರುಕುಗಳು ಕಂಡುಬಂದಿದ್ದು, ಒಟ್ಟಾರೆ ರಚನೆಯು ಉತ್ತಮ ಸ್ಥಿತಿಯಲ್ಲಿದೆ ಎಂದು ಸಕಾರ ಸೋಮವಾರ ಸಂಸತ್ಗೆ ಮಾಹಿತಿ ನೀಡಿದೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಉತ್ತ ನೀಡಿದ್ದು, ಇದು ಕೇಂದ್ರೀಯ ರಕ್ಷಿತ ಸ್ಮಾರಕ ಅಲ್ಲ. ಮಹಾರಾಷ್ಟ್ರ ಸಕಾರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಯ ರಕ್ಷಣೆಯಲ್ಲಿದೆ. ಪರಿಶೀಲನೆ ಸಮಯದ ವೇಳೆ ಕೆಲವು ಬಿರುಕುಗಳು ಕಾಣಿಸಿದೆ. ಆದರೆ ಆತಂಕ ಪಡುವ ಅಗತ್ಯ ಇಲ್ಲ, ಇದರ ಒಟ್ಟಾರೆ ರಚನೆ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಬ್ರಿಟಿಷ್ ದೊರೆ ಐದನೇ ಕಿಂಗ್ ಜಾಜ್ ಆಗಮನದ ನೆನಪಿಗಾಗಿ 1911ರಲ್ಲಿ ಗೇಟ್ ವೇ ಆಫ್ ಇಂಡಿಯಾ ನಿರ್ಮಿಸಲಾಗಿತ್ತು.