ಹೊಸದಿಗಂತ ಡಿಜಿಟಲ್ ಡೆಸ್ಕ್:
ಭುವನೇಶ್ವರದಲ್ಲಿ ವ್ಯಕ್ತಿಯೊಬ್ಬ ಸುಖಾಸುಮ್ಮನೆ ಆರು ನಾಯಿಗಳಿಗೆ ವಿಷ ಹಾಕಿ ಕೊಂದಿದ್ದಾನೆ.
ಮೈತ್ರಿ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಚಂದ್ರಶೇಖರ್‌ಪುರದಲ್ಲಿ ಘಟನೆ ನಡೆದಿದ್ದು, ಪೀಪಲ್ ಫಾರ್ ಅನಿಮಲ್ ಸಂಘಟನೆ ದೂರು ದಾಖಲಿಸಿದೆ.
ಆಹಾರದಲ್ಲಿ ವಿಷ ಹಾಕಿ ವ್ಯಕ್ತಿ ನಾಯಿಗಳನ್ನು ಕೊಂದಿರುವ ಶಂಕೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಾಯಿಗಳನ್ನು ಕೊಲ್ಲುವುದು ಕಾನೂನು ಬಾಹಿರ ಹಾಗೂ ಜೈಲು ಶಿಕ್ಷೆ ಮತ್ತು ದಂಡವನ್ನೂ ವಿಧಿಸಲಾಗುವುದು ಎಂದು ದೂರಿನಲ್ಲಿ ಹೇಳಲಾಗಿದೆ. ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.