ಧೋನಿಗಾಗಿ ಸಿಎಸ್‌ಕೆ ವಿಶೇಷ ಸಮವಸ್ತ್ರವನ್ನು ಸಿದ್ಧಪಡಿಸಬೇಕಿದೆ:‌ ಆನಂದ್‌ ಮಹೀಂದ್ರಾ ಟ್ವೀಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೋಮವಾರ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಎಂಎಸ್ ಧೋನಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಧೋನಿ ಔಟಾದರು. ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಅವರು ಆ ಎರಡು ಸಿಕ್ಸರ್‌ಗಳನ್ನು ಆನಂದಿಸಿರುವುದಾಗಿ ಟ್ವೀಟ್‌ ಮಾಡಿದ್ದಾರೆ.

ಇದೀಗ.. ತಮ್ಮ ಅಭಿಮಾನಿಗಳು ಧೋನಿಯನ್ನು ಸೂಪರ್ ಹೀರೋಗಿಂತ ಹೆಚ್ಚಾಗಿ ನೋಡುತ್ತಾರೆ. ಹಾಗಾಗಿ ಅವರಿಗೆ ಸಿಎಸ್ ಕೆ  ಹೊಸ ಸಮವಸ್ತ್ರವನ್ನು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಎಂಎಸ್ ಧೋನಿಯ ವಿಶೇಷ ಸಮವಸ್ತ್ರದಲ್ಲಿ ಕೇಪ್ ತಯಾರಿಸಬೇಕು ಎಂದು ನನಗೆ ಅನಿಸುತ್ತದೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.. ನಿನ್ನೆಯ ಪಂದ್ಯದ ವಿಡಿಯೋವನ್ನು ಆನಂದ್ ಮಹೀಂದ್ರಾ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಎಂಎಸ್ ಧೋನಿ ಜೊತೆಗಿನ ಅನಿಮೇಟೆಡ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!