ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಅಧಿಕೃತ ಸರ್ಕಾರಿ ಬಂಗಲೆ ಖಾಲಿ ಮಾಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್, ಭಾರತ ನಿಮ್ಮ ಮನೆ ಎಂಬ ಅಭಿಯಾನ ನಡೆಸಿತ್ತು. ಈ ಮೂಲಕ ಕಾಂಗ್ರೆಸ್ ನಾಯಕರು ತಮ್ಮ ತಮ್ಮ ಮನೆಗೆ ರಾಹುಲ್ ಗಾಂಧಿಯನ್ನು ಅಹ್ವಾನಿಸಿದ್ದರು. ಇದೀಗ ಆಯೋಧ್ಯೆಯ ಹನುಮಗರಿಯ ಮಹಾಂತ ಸಂಜಯ್ ದಾಸ್ ಶ್ರೀಗಳು, ರಾಹುಲ್ ಗಾಂಧಿಗೆ ಆಹ್ವಾನ ನೀಡಿದ್ದಾರೆ.
ಹನುಮಗಿರಿ ಧಾಮಲ್ಲಿ ಹಲವು ಆಶ್ರಮಗಳಿವೆ. ಪವಿತ್ರ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಇರಬಹುದು ಎಂದು ಮಹಾಂತ ಶ್ರೀಗಳು ಆಹ್ವಾನ ನೀಡಿದ್ದಾರೆ.
ರಾಹುಲ್ ಗಾಂಧಿಗೆ ನಾವು ಅತ್ಯಂತ ಪ್ರೀತಿಯಿಂದ ಅಹ್ವಾನ ನೀಡುತ್ತಿದ್ದೇವೆ. ರಾಹುಲ್ ಗಾಂಧಿ ಇಲ್ಲಿ ಬಂದು ನೆಲೆಸಬಹುದು. ಪವಿತ್ರ ಕ್ಷೇತ್ರದದರುಶನ ಮಾಡುವ ಸೌಭಾಗ್ಯವೂ ದೊರೆಯಲಿದೆ ಎಂದು ಮಹಾಂತ ಸಂಜಯ್ ದಾಸ್ ಹೇಳಿದ್ದಾರೆ.
ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಲೋಕಸಭಾ ಕಾರ್ಯದರ್ಶಿ, ಸರ್ಕಾರಿ ಬಂಗಲೆ ಕಾಲಿ ಮಾಡುವಂತೆ ನೊಟೀಸ್ ನೀಡಿದ್ದರು. ಇದಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದರು. ಏಪ್ರಿಲ್ 22ರ ಒಳಗಾಗಿ ಸರ್ಕಾರಿ ಬಂಗಲೆ ಕಾಲಿ ಮಾಡುವುದಾಗಿ ಪತ್ರದಲ್ಲಿ ಹೇಳಿದ್ದರು.