ಹೊಸದಿಗಂತ ಡಿಜಿಟಲ್ ಡೆಸ್ಕ್ :
ಐಪಿಎಲ್ 2023 ಟೂರ್ನಿ ಈಗಾಗಲೇ ಶುರುವಾಗಿದ್ದು, ಇದೀಗ ಆತಂಕ ಎದುರಾಗಿದೆ. ಟೂರ್ನಿಗೆ ಕೋವಿಡ್ ಭೀತಿ ಎದುರಾಗಿದೆ. ಐಪಿಎಲ್ ಪಂದ್ಯದ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾಗೆ ಕೋವಿಡ್ ಕಾಣಿಸಿಕೊಂಡಿದೆ. ಇದರ ಪರಿಣಾಮ ಕಮೆಂಟೇಟರಿಯಿಂದ ದೂರ ಉಳಿದಿದ್ದಾರೆ.
45ರ ಹರೆಯದ ಆಕಾಶ್ ಚೋಪ್ರಾ ಸದ್ಯ ಐಪಿಎಲ್ ಟೂರ್ನಿಯಲ್ಲಿ ಕ್ರಿಕೆಟ್ ಕಾಮೆಂಟರಿ ಮಾಡುತ್ತಿದ್ದರು. ಆದರೆ ಆಕಾಶ್ ಚೋಪ್ರಾಗೆ ಕೋವಿಡ್ ವೈರಸ್ ಕಾಣಿಸಿಕೊಂಡಿದೆ. ಈ ಕುರಿತು ಟ್ವಿಟರ್ ಮೂಲಕ ಆಕಾಶ್ ಚೋಪ್ರಾ ಮಾಹಿತಿ ಹಂಚಿಕೊಂಡಿದ್ದಾರೆ. ಕೋವಿಡ್ ವೈರಸ್‌ಗೆ ಕಾಟ್ ಅಂಡ್ ಬೋಲ್ಡ್ ಆಗಿದ್ದೇನೆ. ಸಿ ವೈರಸ್ ಮತ್ತೆ ಬಾಧಿಸಿದೆ. ಆದರೆ ಮೈಲ್ಡ್ ಸಿಂಪ್ಟಸ್ ಇದೆ. ಎಲ್ಲವೂ ನಿಯಂತ್ರಣದಲ್ಲಿದೆ. ಹೀಗಾಗಿ ಕೆಲ ದಿನ ನಾನು ಕಮೆಂಟರಿ ಕರ್ತವ್ಯದಿಂದ ದೂರ ಉಳಿಯುತ್ತಿದ್ದೇನೆ. ಮತ್ತಷ್ಟು ಶಕ್ತಿಯುತವಾಗಿ ಮರಳುತ್ತೇನೆ ಎಂದು ಹೇಳಿದ್ದಾರೆ.
ಆಟಗಾರರು ಸುರಕ್ಷತೆ, ಟೂರ್ನಿಯ ಸುಗಮವಾಗಿ ಸಾಗಲು ಕೋವಿಡ್ ವೈರಸ್‌ನಿಂದ ಸಂಪೂರ್ಣವಾಗಿ ದೂರ ಉಳಿಯಬೇಕಾಗಿದೆ. ಹೀಗಾಗಿ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಗಿದೆ. ಕೋವಿಡ್‌ನಿಂದ ಐಪಿಎಲ್ ಟೂರ್ನಿ ತೀವ್ರ ಹೊಡೆತ ಅನುಭವಿಸಿದೆ. ಕಳೆದ ಆವೃತ್ತಿಗಳು ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತು.