ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನನ್ನು ಬಸ್‌ನಿಂದ ಎಳೆದು ಹೊರತಂದು ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದಿದೆ.
ಮೊಹಮ್ಮದ್ ಜಹೀರ್ ಎಂಬಾತ ಬಸ್‌ನಲ್ಲಿ ಪ್ರಯಾಣಿಸುವಾಗ ಅದೇ ಬಸ್‌ನಲ್ಲಿ ಪರಿಚಯದ ಹುಡುಗಿಯನ್ನು ಮಾತನಾಡಿಸಿದ್ದ. ಇದನ್ನು ಕಂಡ ಗುಂಪೊಂದು ಆತನನ್ನು ಏಕಾಏಕಿ ಬಸ್‌ನಿಂದ ಎಳೆದು ತಂದು ಹಲ್ಲೆ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಜಹೀರ್ ನಿತೇಶ್, ಸಚಿನ್, ದಿನೇಶ್ ಹಾಗೂ ಅವಿನಾಶ್ ಎನ್ನುವವರ ವಿರುದ್ಧ ದೂರು ದಾಖಲಿಸಿದ್ದಾರೆ. ಜಹೀರ್ ಕೆಲಸ ಮುಗಿಸಿ ವಾಪಾಸಾಗುವಾಗ ಪರಿಚಯಸ್ಥ ಹುಡುಗಿ ಕಂಡು ಆಕೆ ಪಕ್ಕದಲ್ಲಿಯೇ ಕುಳಿತು ಮಾತನಾಡುತ್ತಾ ಬರುತ್ತಿದ್ದ. ಆಕೆ ಬೆಳ್ತಂಗಡಿಯಲ್ಲೇ ಇಳಿದಿದ್ದಾಳೆ. ಬಸ್‌ನಲ್ಲಿದ್ದವರು ಈ ವಿಷಯವನ್ನು ಉಜಿರೆಯ ಯುವಕರಿಗೆ ತಿಳಿಸಿದ್ದು, ಉಜಿರೆಯಲ್ಲಿ ಯುವಕರು ಕಾದು ನಿಂತಿದ್ದರು. ಬಸ್ ಉಜಿರೆಗೆ ಬರುತ್ತಿದ್ದಂತೆಯೇ ಜಹೀರ್ ಮೇಲೆ ಹಲ್ಲೆ ಮಾಡಿದ್ದಾರೆ.
Mangaluru, Karnataka | Some people dragged a young man namely Mohammed Zahir out of a bus yesterday and assaulted him for talking to a young woman in the bus in Ujire of Dakshina Kannada district.
A scuffle broke out yesterday between a youth and his acquaintance over a trivial…
— ANI (@ANI) April 4, 2023