ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾದ ಹತ್ತು ವರ್ಷಗಳ ನಂತರ ತಮ್ಮ ಮೊದಲ ಮಗುವನ್ನು ಆಹ್ವಾನಿಸಲು ಸಿದ್ದರಾಗಿದ್ದಾರೆ ಮೆಗಾಪವರ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ. ಮೆಗಾ ಉತ್ತರಾಧಿಕಾರಿಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದ ಮೆಗಾ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ಸುದ್ದಿ ಅತೀವ ಸಂತಸ ತಂದಿದೆ. ಹಿಂದಿನ ವರ್ಷ ಈ ಶುಭ ಸುದ್ದಿಯನ್ನು ಚಿರಂಜೀವಿ ಅವರೇ ಡಿಸೆಂಬರ್ನಲ್ಲಿ ಎಲ್ಲರಿಗೂ ತಿಳಿಸಿದ್ದಾರೆ. ಈ ವರ್ಷದ ಆಗಸ್ಟ್ನಲ್ಲಿ ಮೆಗಾ ಮಗು ಎಂಟ್ರಿ ಕೊಡಲಿದೆ ಎಂದು ಚಿರಂಜೀವಿ ಹೇಳಿದ್ದಾರೆ. ಚರಣ್ ಮತ್ತು ಉಪಾಸನಾ ಸದ್ಯ ದುಬೈನಲ್ಲಿದ್ದಾರೆ.
ಇತ್ತೀಚಿನವರೆಗೂ ರಾಮ್ ಚರಣ್ RRR ಪ್ರಚಾರಗಳು ಮತ್ತು RC15 ಶೂಟಿಂಗ್ಗಳಲ್ಲಿ ಗ್ಯಾಪ್ ಇಲ್ಲದೆ ಸಮಯ ಕಳೆಯುತ್ತಿದ್ದರು. ಈಗ ಇಬ್ಬರೂ ಬಿಡುವು ಮಾಡಿಕೊಳ್ಳುತ್ತಿರುವುದರಿಂದ ಚರಣ್ ಇತ್ತೀಚೆಗಷ್ಟೇ ದುಬೈಗೆ ಹೋಗಿ ರಿಲ್ಯಾಕ್ಸ್ ಆಗಿದ್ದು, ಉಪಾಸನಾ ತನ್ನ ಸೋದರ ಸಂಬಂಧಿ ಮತ್ತು ಸಹೋದರಿಯರೊಂದಿಗೆ ರಜೆಯನ್ನು ಆನಂದಿಸುತ್ತಿದ್ದಾರೆ. ಮತ್ತು ಈ ರಜೆಯಲ್ಲಿಯೇ ಉಪಾಸನಾಗೆ ಸೀಮಂತ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಪಾಸನಾ ಕುಟುಂಬಸ್ಥರು ಉಪಸ್ಥಿತರಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಉಪಾಸನಾ ತಮ್ಮ ಸಹೋದರಿಯರಿಗೆ ಧನ್ಯವಾದ ತಿಳಿಸಿದ್ದಾರೆ.
ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
https://www.instagram.com/reel/CqpQ_vfB7W8/?utm_source=ig_web_copy_link