ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಪಕ್ಷಕ್ಕೆ ಸೇರದೇ ಇದ್ದರೂ ನಿಮ್ಮ ಅವಶ್ಯಕತೆ ಇದೆ, ನನಗೆ ಬೆಂಬಲ ನೀಡಿ ಎಂದು ಕೇಳಿದ್ದೆ. ನಿಮ್ಮ ಮೇಲಿನ ಪ್ರೀತಿ, ವಿಶ್ವಾಸಕ್ಕಾಗಿ ಬೆಂಬಲ ನೀಡುತ್ತೇನೆ ಎಂದು ಸುದೀಪ್ ಒಪ್ಪಿದ್ದರು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ನಿಮಗೋಸ್ಕರ ಪ್ರಚಾರ ಮಾಡ್ತೇನೆ ಎಂದು ಹೃದಯಪೂರ್ವಕವಾಗಿ ಸುದೀಪ್ ಒಪ್ಪಿದ್ದಾರೆ. ಮನುಷ್ಯತ್ವ ಇನ್ನೂ ಬದುಕಿದೆ, ಸಂಬಂಧಗಳಿಗೆ ಬೆಲೆ ಸದಾ ಇದೆ, ದುಡ್ಡಿನಲ್ಲಿಯೇ ಎಲ್ಲವನ್ನೂ ಅಳೆಯಬಾರದು. ಸುದೀಪ್ ನಮ್ಮ ಜೊತೆಗಿರೋದು ನಮಗೆ ದೊಡ್ಡ ಶಕ್ತಿ ಎಂದು ಹೇಳಿದ್ದಾರೆ.