ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ 4 ಸಿಆರ್‌ಪಿಎಫ್ ತಂಡ ಆಗಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಕರ್ತವ್ಯಗಳನ್ನು ನಿರ್ವಹಿಸಲು ಮೊದಲ ಹಂತದ 4 ಸಿಆರ್‌ಪಿಎಫ್ ತಂಡಗಳು ಆಗಮಿಸಿವೆ.

4 ಸಿಆರ್‌ಪಿಎಫ್ ತಂಡಗಳನ್ನು ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ವಿಧಾನ ಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮುಂದೆ ಇನ್ನೂ ಹೆಚ್ಚಿನ ತಂಡಗಳು ಚುನಾವಣೆ ಕರ್ತವ್ಯಕ್ಕೆ ಆಗಮಿಸಲಿವೆ.

ಈ ತಂಡಗಳು ಚುನಾವಣೆ ಗೆ ಸಂಬಂಧಿಸಿದಂತೆ ಪ್ರದೇಶದ ಭದ್ರತೆ, ಚೆಕ್ ಪೋಸ್ಟ್ ಕರ್ತವ್ಯ, ಸ್ಟ್ರಾಂಗ್ ರೂಮ್ ಭದ್ರತೆ ಕರ್ತವ್ಯ, ಪ್ರಮುಖ ಸ್ಥಳಗಳಲ್ಲಿ ರೂಟ್ ಮಾರ್ಚ್, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸ್ಥಳೀಯ ಪೊಲೀಸ್ ರಿಗೆ ಸಹಾಯಕ ಕರ್ತವ್ಯ ಹಾಗೂ ಇತರ ಚುನಾವಣೆ ಗೆ ಸಂಬಂಧಿಸಿದ ಕರ್ತವ್ಯ ಗಳನ್ನು ನಿರ್ವಹಿಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!