ಗಂಡು ಮಗುವಿಗೆ ಜನ್ಮ ನೀಡಿದ ಜೋಶ್ ನಾಯಕಿ ಪೂರ್ಣಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ `ಜೋಶ್’ (Josh Film) ಸಿನಿಮಾದ ನಾಯಕಿ ಪೂರ್ಣಾ (Purnaa) ಗಂಡು ಮಗುವಿಗೆ ಜನ್ಮ ನೀಡಿದ್ದಾರ. ದುಬೈನ (Dubai) ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದು, ತಾಯಿ- ಮಗು ಇಬ್ಬರು ಆರೋಗ್ಯವಾಗಿದ್ದಾರೆ.

ಜೋಶ್, 100 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಶಮ್ನಾ ಕಾಸಿಮ್ (Shamna Kasim) ಅಲಿಯಾಸ್ ಪೂರ್ಣಾ ಅವರು ಉದ್ಯಮಿ ಶಾನಿದ್ ಆಸಿಫ್ (Shanid Asif) ಜೊತೆ ವೈವಾಹಿಕ ಜೀವನಕ್ಕೆ 2022ರಲ್ಲಿ ಕಾಲಿಟ್ಟರು.

ಕಳೆದ ಫೆಬ್ರವರಿಯಲ್ಲಿ ಅದ್ದೂರಿಯಾಗಿ ಬೇಬಿ ಶವರ್ ಕಾರ್ಯಕ್ರಮ ಮಾಡಲಾಗಿತ್ತು. ಈಗ ಮನೆಗೆ ಮುದ್ದು ಮಗನ ಎಂಟ್ರಿಯಾಗಿರುವ ಸಂತಸದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!