ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವಾರು ಬಗೆಯ ರೈಸ್ ಗಳನ್ನು ನಾವು ತಿಂದಿರುತ್ತೇವೆ ಅದರಲ್ಲಿ ಮುಖ್ಯವಾಗಿ ಜೀರಾ ರೈಸ್, ಟೊಮೆಟೊ ರೈಸ್ , ಪಲಾವ್, ಲೆಮನ್ ರೈಸ್, ಪುಳಿಯೋಗರೆ ಹೀಗೆ ರೈಸ್ ಐಟಮ್ ಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವುದು ಗೀರೈಸ್. ಹಾಗಾದರೆ ರುಚಿ-ರುಚಿಯಾದ ಗೀರೈಸ್ ಮಾಡುವ ರೀತಿಯನ್ನು ನಾವು ಹೇಳಿಕೊಡುತ್ತೇವೆ. ನೀವು ಮನೆಯಲ್ಲಿ ಮಾಡಿನೋಡಿ… ಸವಿಯಿರಿ…
ಬೇಕಾಗುವ ಸಾಮಗ್ರಿಗಳು
ಬಾಸ್ಮತಿ ಅಕ್ಕಿ-3ಕಪ್, (20ನಿಮಿಷ ನೀರಿನಲ್ಲಿ ನೆನೆಸಿಡಿ), ತುಪ್ಪ-4ಚಮಚ, ತೆಂಗಿನೆಣ್ಣೆ-2ಚಮಚ, ಪಾಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ-ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್-1ಚಮಚ, ಹಸಿಮೆಣಸು-4, ಈರುಳ್ಳಿ-2, ಗೋಡಂಬಿ, ಒಣದ್ರಾಕ್ಷಿ-ಸ್ವಲ್ಪ, ಪುದೀನಾ,ಕೊತ್ತಂಬರಿ ಸೊಪ್ಪು-ಸ್ವಲ್ಪ, ಹಾಲು-1/4ಕಪ್,ಮೊಸರು-1/4 ಕಪ್, ಉಪ್ಪು-ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:
ಮೊದಲಿಗೆ ಒಂದು ದೊಡ್ಡ ಪಾತ್ರೆಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ, ಬಿಸಿಯಾದ ಮೇಲೆ ಅದಕ್ಕೆ ಚಕ್ಕೆ, ಲವಂಗ, ಪಾಲವ್ ಎಲೆ, ಏಲಕ್ಕಿ ಹಾಕಿ ಹುರಿಯಿರಿ. ತದನಂತರ ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಸಮಯ ಹುರಿಯಿರಿ. ಆಮೇಲೆ ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಕಂದು ಬಣ್ಣ ಬಂದ ತಕ್ಷಣ ಈರುಳ್ಳಿ ಸೇರಿಸಿ ಹುರಿಯಿರಿ. ನಂತರ ಗ್ರೀರೈಸ್ ಸಿಕ್ರೇಟ್ ರೆಸಿಪಿ ಎಂದರೆ ಹಾಲು. ಹಾಕಿ ಒಂದು ನಿಮಿಷಗಳ ನಂತರ ಮೊಸರನ್ನು ಕೂಡ ಸೇರಿಸಿ ಅದರ ಜೊತೆಗೆ ಕೊತ್ತಂಬರಿ ಸೊಪ್ಪು, ಪುದೀನಾ ಹಾಕಿ ಸರಿಯಾಗಿ ಮಿಕ್ಸ್ ಮಾಡಿರಿ. ತದನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಅದಕ್ಕೆ ನೆನೆಸಿಟ್ಟ ಬಾಸ್ಮತಿ ಅಕ್ಕಿ ಹಾಕಿ ಮಸಾಲದೊಂದಿಗೆ ಕೆಲವು ನಿಮಿಷ ಹಾಗೆ ಬಿಡಿ. ಈ ರೀತಿ ಮಾಡುವುದರಿಂದ ತುಪ್ಪ/ಎಣ್ಣೆ , ಮಸಾಲೆಯು ಅನ್ನಕ್ಕೆ ಹೊಳಪು ಕೊಡುತ್ತದೆ. ತದನಂತರ ಸಮಪ್ರಮಾಣದ ನೀರನ್ನು ಸೇರಿಸಿ ಪಾತ್ರೆಯ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಬೇಯಿಸಿರಿ. ಬಿಸಿ-ಬಿಸಿಯಾದ ಗೀರೈಸ್, ವೆಜ್ಕುರ್ಮಾದೊಂದಿಗೆ ಸವಿಯಲು ಬಹಳ ರುಚಿಕರ.