ಹೊಸದಿಗಂತ ವರದಿ ಯಲ್ಲಾಪುರ :
ಯಲ್ಲಾಪುರ ಅಬಕಾರಿ ಅಧಿಕಾರಿಗಳು ಮುಂಡಗೋಡದ ಹುಬ್ಬಳ್ಳಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಪಡಿಸಿಕೊಂಡಿದ್ದಾರೆ.
ಮುಂಡಗೋಡ ಪಟ್ಟಣದಿಂದ 2ಕಿ.ಮೀ ಅಂತರದಲ್ಲಿ ಹುಬ್ಬಳ್ಳಿ ರಸ್ತೆಯಲ್ಲಿ ಕರ್ನಾಟಕ ವಿಧಾನ ಸಭೆ ಚುನಾವಣೆ ನಿಮಿತ್ತ ರಸ್ತೆ ಗಾವಲು ಮಾಡುತ್ತಿರುವಾಗ ಬಾಚಣಿಕಿ ಗ್ರಾಮದ ಪಕೀರಯ್ಯಾ, ತಿಪ್ಪಯ್ಯಾ, ಹಿರೇಮಠ ಇತರರು ದ್ವಿಚಕ್ರ ವಾಹನ ಮೇಲೆ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಪ್ತಿ ಮಾಡಿದ ಮದ್ಯ ಮತ್ತು ವಾಹನದ ಮೌಲ್ಯ ರೂ.78,240 ಎಂದು ಅಂದಾಜಿಸಲಾಗಿದೆ.
ಅಬಕಾರಿ ಉಪ ಅಧೀಕ್ಷಕ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕ ಮಂಜುನಾಥ ಜೋಗಳೇಕರ, ಸಿಬ್ಬಂದಿಗಳಾದ ದ್ರುವರಾಜ ಬ್ಯಾಹಟ್ಟಿ, ಸಿ.ಪಿ.ರಾಠೋಡ, ಮಹಾಂತೇಶ ಹೊಣ್ಣೂರ ಮತ್ತು ಪ್ರಸನ್ನ ನೇತ್ರಕರ ದಾಳಿ ನಡೆಸಿದ್ದಾರೆ.