ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲಾ ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟೇ ಹೊಸ ಹೀರೋಗಳು, ಯಂಗ್ ಹೀರೋಗಳು ಬರುತ್ತಿದ್ದರೂ ಅವರಿಗೆ ಪೈಪೋಟಿ ನೀಡಲು ಹಿರಿಯ ನಾಯಕರು ಸಿನಿಮಾ ಮಾಡುತ್ತಿದ್ದಾರೆ. 80-90ರ ದಶಕದಲ್ಲಿ ಪದಾರ್ಪಣೆ ಮಾಡಿದ ನಾಯಕರೂ ಇನ್ನೂ ಚಿಕ್ಕ ವಯಸ್ಸಿನವರಂತೆ ಸತತವಾಗಿ ಸಿನಿಮಾ ಮಾಡುತ್ತಿದ್ದಾರೆ. ಬಾಲಿವುಡ್ ಪ್ರವೇಶಿಸಿ ಸ್ಟಾರ್ ಹೀರೋ ಎನಿಸಿಕೊಂಡವರೆಲ್ಲ 50 ವರ್ಷ ದಾಟಿದರೂ ಸೂಪರ್ ಸಕ್ಸಸ್ ನೀಡುತ್ತಲೇ ಇದ್ದಾರೆ.
ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಮೀರ್ ಖಾನ್ ಮತ್ತು ಅಜಯ್ ದೇವಗನ್ ಬಾಲಿವುಡ್‌ನ ಹಿರಿಯ ಸ್ಟಾರ್ ಹೀರೋಗಳು. ಇವರೆಲ್ಲ ಸರಣಿ ಚಿತ್ರಗಳನ್ನು ಮಾಡುತ್ತಾ ಮುನ್ನಡೆಯುತ್ತಿದ್ದಾರೆ. ಬಾಲಿವುಡ್‌ನಲ್ಲಿ ಅನೇಕ ಯಂಗ್ ಹೀರೋಗಳಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ಯುವ ಹೀರೋಗಳ ಬಗ್ಗೆ ಸಲ್ಮಾನ್ ಖಾನ್ ಮಾಡಿರುವ ಕಾಮೆಂಟ್ ವೈರಲ್ ಆಗಿದೆ.
ಫಿಲ್ಮ್‌ಫೇರ್ ಪ್ರಶಸ್ತಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಭಾಗವಹಿಸಿ ಮಾತನಾಡಿದ್ದು… ನಾವು ಐವರು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ನಾನು, ಶಾರುಖ್, ಅಕ್ಷಯ್, ಅಮೀರ್, ಅಜಯ್ ಚಿತ್ರಗಳನ್ನು ಮಾಡುತ್ತಲೇ ಇರುತ್ತೇವೆ. ಚಿತ್ರಗಳು ಯಶಸ್ವಿಯಾದರೆ ಮಾತ್ರ ಸಂಭಾವನೆ ಹೆಚ್ಚಿಸುತ್ತೇವೆ. ಆದರೆ ಈಗಿನ ಕೆಲವು ಹೀರೋಗಳು ಈಗ ಒಂದೋ ಎರಡೋ ಚಿತ್ರಗಳಿಗೆ ಸಂಭಾವನೆ ಹೆಚ್ಚಿಸುತ್ತಿದ್ದಾರೆ, ಯಾಕೆ? ಬಾಲಿವುಡ್ ಯುವ ಹೀರೋಗಳ ಬಗ್ಗೆ ಸಲ್ಮಾನ್ ಖಾನ್ ಮಾಡಿರುವ ಕಾಮೆಂಟ್ ವೈರಲ್ ಆಗಿದೆ. ಇದಕ್ಕೆ ಯುವ ಹೀರೋಗಳಾದರೂ ಸ್ಪಂದಿಸುತ್ತಾರಾ ನೋಡೋಣ.