ಹೊಸದಿಗಂತ ಡಿಜಿಟಲ್ ಡೆಸ್ಕ್ :
ಗುಜರಾತ್ನಲ್ಲಿ 54 ಅಡಿ ಎತ್ತರದ ಹನುಮನ ಪ್ರತಿಮೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅನಾವರಣ ಮಾಡಿದ್ದಾರೆ.
ನಾಡಿನಾದ್ಯಂತ ಇಂದು ಹನುಮ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಬೊಟಾಡ್ ಜಿಲ್ಲೆಯ ಸಾರಂಗ್‌ಪುರ ದೇವಸ್ಥಾನದಲ್ಲಿ 54 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಇದೇ ವೇಳೆ ಏಳು ಎಕರೆಯಲ್ಲಿ ನಿರ್ಮಿಸಲಾಗಿರುವ ದೇವಸ್ಥಾನದ ನೂತನ ರೆಸ್ಟೋರೆಂಟ್‌ಗೂ ಅಮಿತ್ ಶಾ ಚಾಲನೆ ನೀಡಿದರು.
ಪಂಚಧಾತುಗಳಿಂದ ತಯಾರಿಸಿದ 30 ಸಾವಿರ ಕೆಜಿ ತೂಕದ ಈ ವಿಗ್ರಹವನ್ನು ಏಳು ಕಿ.ಮೀ ದೂರದಿಂದಲೂ ನೋಡಬಹುದಾಗಿದೆ. ಇದಲ್ಲದೇ ಈ ಪ್ರತಿಮೆಯನ್ನು ಆರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು, ಹಬ್ಬದ ಸಮಯದಲ್ಲಿ ಶಾಂತಿ ಕಾಪಾಡಬೇಕು ಮತ್ತು ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಎಲ್ಲಾ ರೀತಿಯ ಶಕ್ತಿಗಳ ಮೇಲೆ ನಿಗಾ ಇಡಬೇಕು ಎಂದು ಗೃಹ ಸಚಿವಾಲಯ ನಿನ್ನೆ ಟ್ವೀಟ್ ಮೂಲಕ ಸಲಹೆ ನೀಡಿತ್ತು.