ಮಗಳಿಗೆ ಗಣಪತಿ, ಆಂಜನೇಯ ದರುಶನ ಮಾಡಿಸಿ ಭವಿಷ್ಯಕ್ಕಾಗಿ ಪ್ರಾರ್ಥಿಸಿದ ನಟಿ ಪ್ರಿಯಾಂಕಾ ಚೋಪ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂಬೈಗೆ (Mumbai) ಈಗಾಗಲೇ ಬಂದಿಳಿದಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra), ಬೆಳಗ್ಗೆ ಮುಂಬೈನ ಪ್ರಸಿದ್ಧ ಗಣಪತಿ, ಆಂಜನೇಯನ ದೇವಸ್ಥಾನಕ್ಕೆ (Ganesh Temple) ಮಗಳೊಂದಿಗೆ ಭೇಟಿ ನೀಡಿ, ದರುಶನ ಮಾಡಿಸಿದ್ದಾರೆ. ಮಗಳ ಭವಿಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

ಅಂಬಾನಿ ಸಾಂಸ್ಕೃತಿಕ ಭವನೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವ ಮೂಲಕ ಮೊದಲ ಬಾರಿಗೆ ಭಾರತಕ್ಕೆ ಮಗಳನ್ನೂ ಕರೆತಂದಿದ್ದಾರೆ.

ಮೊನ್ನೆಯಷ್ಟೇ ಪತಿ ನಿಕ್ ಜೊತೆ ಆಟೋದಲ್ಲಿ ಮುಂಬೈ ಸುತ್ತಿದ್ದ ಪ್ರಿಯಾಂಕಾ, ಆಟೋದಲ್ಲಿಯೇ ಪತಿಗೆ ಮುಂಬೈ ಪರಿಚಯಿಸಿದ್ದರು. ಆಟೋ ಪ್ರಯಾಣದ ಅನುಭವನ್ನು ಅಭಿಮಾನಿಗಳ ಜೊತೆ ಅವರು ಹಂಚಿಕೊಂಡಿದ್ದರು. ಅಲ್ಲದೇ, ತಾವು ಓಡಾಡಿದ ಜಾಗವನ್ನೆಲ್ಲ ಪತಿಗೆ ಪ್ರಿಯಾಂಕಾ ಪರಿಚಯಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!