ಹೊಸದಿಗಂತ ಡಿಜಿಟಲ್ ಡೆಸ್ಕ್ :
200 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರಿಗೆ ‘ಹ್ಯಾಪಿ ಈಸ್ಟರ್’ ಎಂದು ಶುಭಕೋರಿ ಪತ್ರ ಬರೆದಿದ್ದಾರೆ.
‘ಮೈ ಬೇಬಿ ಮೈ ಬೊಮ್ಮಾ, ಜಾಕ್ವೆಲಿನ್, ಬೇಬಿ ಐ ವಿಶ್ ಯು ವೆರಿ ಹ್ಯಾಪಿ ಈಸ್ಟರ್. ಬೇಬಿ ನಾನು ನಿನಗೆ ಈಸ್ಟರ್ ಶುಭಾಶಯಗಳನ್ನು ಕೋರುತ್ತೇನೆ. ನಿಮ್ಮ ನೆಚ್ಚಿನ ಹಬ್ಬಗಳಲ್ಲಿ ಇದು ಒಂದಾಗಿದೆ ಮತ್ತು ಈಸ್ಟರ್ ಮೊಟ್ಟೆಗಳ ಮೇಲಿನ ನಿಮ್ಮ ಪ್ರೀತಿ. ನಿಮ್ಮೊಂದಿಗೆ ಇರುವುದನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಗ್ರಹದಲ್ಲಿ ನಿನ್ನಷ್ಟು ಸುಂದರಿ ಯಾರೂ ಇಲ್ಲ. ನನ್ನ ಬನ್ನಿ ಮೊಲ, ನಾನು ನಿನ್ನನ್ನು ಪ್ರೀತಿಸುತ್ತೇನೆ’ ನೀನು ಮತ್ತು ನಾನು ಎಂದೆಂದಿಗೂ ಶಾಶ್ವತ, ನೀವೆಂದು ನನ್ನವರು’ ಎಂದು ಸುಕೇಶ್ ಪತ್ರದಲ್ಲಿ ತಿಳಿಸಿದ್ದಾರೆ.
ಬೇಬಿ ನಾನು ನಿನ್ನ ಬಗ್ಗೆ ಯೋಚಿಸದ ಕ್ಷಣವಿಲ್ಲ ಮತ್ತು ಅದೇ ರೀತಿ ನಿನಗೂ ಆಗಿದೆ ಎಂದು ನನಗೆ ತಿಳಿದಿದೆ. ಮುಂದಿನ ಈಸ್ಟರ್ ನೀನು ನಿನ್ನ ಜೀವನದಲ್ಲಿ ಆಚರಿಸಿದ ಅತ್ಯುತ್ತಮ ಈಸ್ಟರ್ ಆಗಲಿದೆ. ನಾನು ಆ ರೀತಿಯಾಗುವಂತೆ ಮಾಡುತ್ತೇನೆ, ನನ್ನ ಬೊಂಬೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸುಕೇಶ್ ಅವರು ಜಾಕ್ವೆಲಿನ್ ಫರ್ನಾಂಡೀಸ್ ಮೇಲಿನ ಪ್ರೀತಿಯ ಬಗ್ಗೆ ನಿರಂತರವಾಗಿ ಪತ್ರಗಳನ್ನು ಬರೆಯುತ್ತಲೇ ಇದ್ದಾರೆ. ಈ ಹಿಂದೆ ಬರೆದಿದ್ದ ಪತ್ರಗಳು ಸಾಕಷ್ಟು ವೈರಲ್ ಆಗಿವೆ.