ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಂಡೀಪುರದಲ್ಲಿ ಇಂದು ಪ್ರಧಾನಿ ಮೋದಿ ಸಫಾರಿ ಮಾಡಿದ್ದು, ಈ ಕುರಿತು ನಟ ಪ್ರಕಾಶ್ ರೈ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಕಾಶ್ ರೈ ‘ ನಾನು ಯಾರು ಬಲ್ಲೆಯೇನು..? ಪ್ರಚಾರ ಮಂತ್ರಿನಾ.. ಪ್ರಧಾನ ಮಂತ್ರಿನಾ ಹೇಳಿ ನೋಡೋಣ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ.. ಬಂಡೀಪುರದ ಫೈಲ್ಸ್. ನೋಡಲು ಮರೆಯದಿರಿ.. ಎಂದು ಹೇಳಿದ್ದಾರೆ.
Tell me who I am #PracharManthri or #PradhanManthri .. ನಾನು ಯಾರು ಬಲ್ಲೆಯೇನು???? .. ಪ್ರಚಾರ ಮಂತ್ರಿನಾ…ಪ್ರಧಾನ ಮಂತ್ರಿನಾ …ಹೇಳಿ ನೋಡೊಣ … #justasking pic.twitter.com/BtBm30bc1N
— Prakash Raj (@prakashraaj) April 9, 2023
ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ಅಭಯಾರಣ್ಯದಲ್ಲಿ 22 ಕಿ.ಮೀ ಸಫಾರಿ ಮಾಡಿದ್ದಾರೆ.