ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳಿಗೆ ಆರು ತಿಂಗಳವರೆಗೂ ಎದೆಹಾಲೊಂದೇ ಆಹಾರ, ಮಗುವಿನ ತೂಕ ಹೆಚ್ಚಳ,ಆರೋಗ್ಯಕ್ಕೆ ತಾಯಿ ಹಾಲೇ ಅಮೃತ. ತಾಯಿ ಹಾಲು ಸಾಲುತ್ತಿಲ್ಲ, ಮಗು ಬೆಳವಣಿಗೆ ಸರಿಯಾಗಿ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿವಮೊಗ್ಗದ ಕುಪ್ಪಗಡ್ಡೆ ಗ್ರಾಮದ ಶಾಂತಾ ತಮ್ಮ ಒಂದೂವರೆ ತಿಂಗಳ ಹಸುಗೂಸಿನೊಂದಿಗೆ ತುಂಬೆಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆರಿಗೆಗೆ ತಾಯಿ ಮನೆಗೆ ಬಂದಿದ್ದ ಶಾಂತಾಗೆ ಎದೆ ಹಾಲಿನ ಕೊರತೆಯಾಗಿತ್ತು. ಹಾಲಿನ ಕೊರತೆಯಿಂದಾಗಿ ಮಗುವಿನ ಬೆಳವಣಿಗೆಗೆ ತೊಂದರೆಯಾಗುತ್ತಿದೆ ಎಂದು ಮಾನಸಿಕವಾಗಿ ನೊಂದಿದ್ದ ಶಾಂತ ಆತ್ಮಹತ್ಯೆ ನಿರ್ಧಾರಕ್ಕೆ ಶರಣಾಗಿದ್ದಾರೆ. ಮಗು ಮೃತದೇಹ ಹೊಂಡದಲ್ಲಿ ತೇಲುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗು ಹಾಗೂ ತಾಯಿಯ ಶವವನ್ನು ತೆಗೆದಿದ್ದು, ಅಂತ್ಯಕ್ರಿಯೆ ನೆರವೇತಿಸಲಾಗಿದೆ.
ಮಗುವಿಗೆ ಹಾಲಿನ ಕೊರತೆ ಸಾಮಾನ್ಯ ಸಮಸ್ಯೆಯಾಗಿದ್ದು, ಇದಕ್ಕೆ ಸಾಕಷ್ಟು ಪರಿಹಾರಗಳಿವೆ. ಹಾಲು ಹೆಚ್ಚಾಗಲು ಮಾತ್ರೆಗಳು, ಹಾಲಿನ ಪುಡಿ, ಬೇರೆ ತಾಯಿಯ ಹಾಲು ಹೀಗೆ ಸಾಕಷ್ಟು ಪರಿಹಾರಗಳಿವೆ. ಸಮಸ್ಯೆ ಎನಿಸಿದಾಗ ವೈದ್ಯರನ್ನು ಭೇಟಿ ಮಾಡಿ.