Sunday, December 14, 2025

ಇಂಡಿಯಾ vs ಸೌತ್ ಆಫ್ರಿಕಾ: ಸರಣಿಯ ನಿರ್ಣಾಯಕ ಘಟ್ಟ! 3ನೇ ಟಿ20 ಕದನಕ್ಕೆ ಮುಹೂರ್ತ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿ ರೋಚಕ ಘಟ್ಟ ತಲುಪಿದೆ. ಆರಂಭಿಕ ಎರಡು ಪಂದ್ಯಗಳು ಮುಗಿದಿದ್ದು, ಉಭಯ ತಂಡಗಳು ತಲಾ ಒಂದು ಪಂದ್ಯ ಗೆಲ್ಲುವ ಮೂಲಕ 1-1 ಸಮಬಲ ಸಾಧಿಸಿವೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅಬ್ಬರಿಸಿದರೆ, ದ್ವಿತೀಯ ಪಂದ್ಯದಲ್ಲಿ ಸೌತ್ ಆಫ್ರಿಕಾ ಭರ್ಜರಿ ಜಯ ಸಾಧಿಸಿ ತಿರುಗೇಟು ನೀಡಿದೆ.

ಇದೀಗ ಕಪ್ ಗೆಲ್ಲುವ ಹೋರಾಟದಲ್ಲಿ ನಿರ್ಣಾಯಕವೆನಿಸಿರುವ ಮೂರನೇ ಟಿ20 ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಈ ಮಹತ್ವದ ಪಂದ್ಯದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ:

ವಿವರಮಾಹಿತಿ
ದಿನಾಂಕಡಿಸೆಂಬರ್ 14
ವಾರಭಾನುವಾರ
ಸ್ಥಳಧರ್ಮಶಾಲಾ, ಹೆಚ್​ಪಿಸಿಎ ಸ್ಟೇಡಿಯಂ, ಹಿಮಾಚಲ ಪ್ರದೇಶ
ಪಂದ್ಯದ ಆರಂಭಭಾರತೀಯ ಕಾಲಮಾನ ರಾತ್ರಿ 7:00 ಗಂಟೆಗೆ
ಟಾಸ್ಸಂಜೆ 6:30 ಗಂಟೆಗೆ

ಐದು ಪಂದ್ಯಗಳ ಸರಣಿಯ ಎಲ್ಲಾ ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶವಿದೆ:

ಟಿವಿ ಚಾನೆಲ್‌ಗಳು: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲೈವ್ ವೀಕ್ಷಿಸಬಹುದು.

ಲೈವ್ ಸ್ಟ್ರೀಮಿಂಗ್: ಜಿಯೋ ಸಿನಿಮಾ ವೆಬ್‌ಸೈಟ್ ಮತ್ತು ಆ್ಯಪ್‌ನಲ್ಲಿ ಪಂದ್ಯವನ್ನು ಲೈವ್ ಆಗಿ ಸ್ಟ್ರೀಮ್ ಮಾಡಬಹುದು.

ಸೌತ್ ಆಫ್ರಿಕಾ ಟಿ20 ತಂಡ:
ಐಡನ್ ಮಾರ್ಕ್ರಾಮ್ (ನಾಯಕ), ಓಟ್ನಿಲ್ ಬಾರ್ಟ್‌ಮನ್, ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಡೊನೊವನ್ ಫೆರೇರಾ, ರೀಝ ಹೆಂಡ್ರಿಕ್ಸ್, ಮಾರ್ಕೋ ಯಾನ್ಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಜಾರ್ಜ್ ಲಿಂಡೆ, ಲುಂಗಿ ಎನ್‌ಗಿಡಿ, ಅನ್ರಿಕ್ ನೋಕಿಯ, ಲುಥೋ ಸಿಪಮ್ಲಾ, ಟ್ರಿಸ್ಟನ್ ಸ್ಟಬ್ಸ್.

ಭಾರತ ಟಿ20 ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್.

error: Content is protected !!