ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರ್ಷಗಳಿಂದ ಮೈಗ್ರೇನ್ ಸಮಸ್ಯೆಯಿಂದ ಮಾಳವಿಕಾ ಬಳಲುತ್ತಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಇದೀಗ ಮೈಗ್ರೇನ್ ಚಿಕ್ಕ ಸಮಸ್ಯೆ ಅಲ್ಲ, ಇದನ್ನು ಗಂಭೀರವಾಗಿ ಸ್ವೀಕರಿಸಿ ಇಲ್ಲವಾದರೆ ನನ್ನ ರೀತಿ ನೀವು ಆಸ್ಪತ್ರೆ ಸೇರಬೇಕಾಗುತ್ತದೆ ಎಂದು ಮಾಳವಿಕಾ ಹೇಳಿಕೊಂಡಿದ್ದಾರೆ.
ಸಣ್ಣ ತಲೆನೋವು ಎಂದು ಎಷ್ಟೋ ಮಂದಿ ಅದನ್ನು ಇಗ್ನೋರ್ ಮಾಡುತ್ತೀರಿ. ಆದರೆ ಇದು ದೊಡ್ಡ ಸಮಸ್ಯೆ ತಂದೊಡ್ಡುತ್ತದೆ. ಆರೋಗ್ಯವೇ ಭಾಗ್ಯ. ಚಿಕ್ಕ ನೋವುಗಳೇ ಮುಂದೆ ದೊಡ್ಡದಾಗುತ್ತವೆ ಇಗ್ನೋರ್ ಮಾಡಬೇಡಿ ಎಂದಿದ್ದಾರೆ.