Sunday, December 14, 2025

ವಾರ್ನಿಂಗ್‌ಗೆ ಹೆದರಲ್ಲ, ನಾನು ಜೈಲಿಗೆ ಹೋದವನು.. ಹೆಬ್ಬಾರ್‌ಗೆ ಹೆದರ್ತಿನಾ? ಡಿಕೆಶಿ ಗುಡುಗು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ವಿಧಾನಸೌಧದಲ್ಲಿ ಅಪಾರ್ಟ್‌ಮೆಂಟ್‌ ನಿವಾಸಿಗಳೊಂದಿಗೆ ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲಿಕತ್ವ ಮತ್ತು ನಿರ್ವಹಣಾ ವಿಧೇಯಕ-2025 ರ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ, ಕಿರಣ್ ಹೆಬ್ಬಾರ್ ಎಂಬ ವ್ಯಕ್ತಿ ಬರೆದ ಪತ್ರವೊಂದರ ವಿಚಾರವಾಗಿ ಡಿಸಿಎಂ ವೇದಿಕೆಯಲ್ಲೇ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿ, ತಮ್ಮ ಆಕ್ರೋಶವನ್ನು ಹೊರಹಾಕಿದರು.

ಪತ್ರದಲ್ಲಿ ಕಿರಣ್ ಹೆಬ್ಬಾರ್ ಅವರು ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿ ‘ವಾರ್ನ್’ ಮಾಡಿರುವುದನ್ನು ಡಿಸಿಎಂ ಉಲ್ಲೇಖಿಸಿದರು. “ಕಿರಣ್ ಹೆಬ್ಬಾರ್ ಅನ್ನೋನು, ಕಾಂಗ್ರೆಸ್ ಸರ್ಕಾರ ಕೆಲಸ ಮಾಡಿಲ್ಲ ಎಂದು ವಾರ್ನ್ ಮಾಡಿ ಪತ್ರ ಬರೆದಿದ್ದಾನೆ. ನಾವು ಪ್ರಮುಖ ವೋಟ್ ಬ್ಯಾಂಕ್ ಆಗಿದ್ದೇವೆ ಅಂತ ಹೇಳ್ತಾನೆ. ಕೆಲವರಿಗೆ ನಾನು ಯಾರು ಅನ್ನೋದೇ ಗೊತ್ತಿಲ್ಲ. ಬೇಸಿಕ್ ಕಾಮನ್ ಸೆನ್ಸ್ ಇಟ್ಕೊಂಡು ನನ್ನ ಹತ್ತಿರ ಡೀಲ್ ಮಾಡಬೇಕು. ನನಗೆ ವಾರ್ನ್ ಮಾಡೋದು, ಎಚ್ಚರಿಕೆ ಕೊಡೋದು ನಡೆಯಲ್ಲ” ಎಂದು ಖಡಾಖಂಡಿತವಾಗಿ ಹೇಳಿದರು.

“ಪ್ರಧಾನಿ, ಕೇಂದ್ರ ಸರ್ಕಾರ, ಹೋಂ ಮಿನಿಸ್ಟರ್‌ಗೆ ಹೆದರದೆ ಜೈಲಿಗೆ ಹೋದವನು ನಾನು. ಇವನು ಯಾರು? ಹೆಬ್ಬಾರ್‌ಗೆ ಹೆದರುತ್ತೀನಾ?” ಎಂದು ನೇರವಾಗಿಯೇ ಪ್ರಶ್ನಿಸಿದರು.

ತಮ್ಮೊಂದಿಗೆ ಬೆದರಿಕೆಯ ಮೂಲಕ ವ್ಯವಹರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಡಿಕೆ ಶಿವಕುಮಾರ್, ಬೆಂಗಳೂರಿನ ಮತದಾರರಿಗೆ ನೇರವಾಗಿ ಮಾತುಗಳನ್ನು ಹೇಳಿದರು.

“ಎಲ್ಲರನ್ನೂ ಹೆದರಿಸಿದ ಹಾಗೆ ನನ್ನ ಜೊತೆ ಡೀಲ್ ಮಾಡೋಕೆ ಆಗಲ್ಲ. ಭ್ರಮೆ ಬೇಡ, ಬೆದರಿಕೆ ಹಾಕೋದು ನಮ್ಮ ಸರ್ಕಾರದ ವಿರುದ್ಧ ನಡೆಯಲ್ಲ. ನಾನು ನೇರ ಮತ್ತು ದಿಟ್ಟವಾಗಿ ಮಾತನಾಡುತ್ತೇನೆ. ಬೇಜಾರ್ ಮಾಡ್ಕೋಬೇಡಿ,” ಎಂದು ಖಡಕ್ ಉತ್ತರ ನೀಡಿದ್ದಾರೆ.

error: Content is protected !!