ಹೊಸ ದಿಗಂತ ಡಿಜಿಟಲ್ ಡೆಸ್ಕ್:
‘ಜಗದೀಶ್ ಶೆಟ್ಟರ್‌ಗೆ ಎಲ್ಲಾ ಸ್ಥಾನಮಾನಗಳನ್ನು ಕೊಟ್ಟಿದ್ದೇವೆ. ಎಂಎಲ್‌ಸಿ ಸ್ಥಾನ ಕೊಟ್ಟಿದ್ದೆವು. ಅವರಿಗೆ ನಾವೇನು ಕಡಿಮೆ ಮಾಡಿರಲಿಲ್ಲ. ಲಕ್ಷ್ಮಣ ಸವದಿ ಕೂಡ ತಮ್ಮ ಸ್ಥಾನದಲ್ಲಿ ಮುಂದುವರಿಯಬಹುದಿತ್ತು. ಎಲ್ಲಾ ಸ್ಥಾನಮಾನಗಳನ್ನು ಪಡೆದು ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಇದು ನಂಬಿಕೆ, ವಿಶ್ವಾಸಕ್ಕೆ ಮಾಡಿದ ದ್ರೋಹ. ಮುಖ್ಯವಾಗಿ ಜನರಿಗೆ ಮಾಡಿದ ದ್ರೋಹ. ಜನ ಅವರನ್ನು ಕ್ಷಮಿಸುವುದಿಲ್ಲ’ ಎಂದಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿಎಸ್ ಯಡಿಯೂರಪ್ಪ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ರಾಜೀನಾಮೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಶೆಟ್ಟರ್ ರಾಜೀನಾಮೆ ಕೊಟ್ಟಿದ್ದು ಸರಿಯಲ್ಲ. ಶೆಟ್ಟರ್ ಏನು ಅನ್ಯಾಯ ಆಗಿತ್ತು? ಪಕ್ಷ ಹಲವಾರು ಅವಕಾಶಗಳನ್ನು ನೀಡಿದೆ. ಮೋದಿ ಜೊತೆಗೆ ಹೆಜ್ಜೆ ಹಾಕುವುದು ನಮ್ಮ ಉದ್ದೇಶ’ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಆದರೂ ಹಠ ಮಾಡಿ ಕಾಂಗ್ರೆಸ್ ಪಕ್ಷದ ಕಡೆಗೆ ಹೋಗುತ್ತಿರುವ ಅಕ್ಷಮ್ಯ ಅಪರಾಧ. ಬಿಜೆಪಿ ಹೇಗೆ ನಡೆದುಕೊಂಡು ಬಂದಿದೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿಗೆ. ಅವರು ತಮ್ಮ ತಪ್ಪನ್ನು ಅರೆತುಕೊಂಡು ಬಂದರೆ ಸ್ವಾಗತ ಮಾಡಲಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.