ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಜಧಾನಿ ಖಾರ್ಟೂಮ್ ಸೇರಿದಂತೆ ಸುಡಾನ್‌ನ ವಿವಿಧೆಡೆ ಕಳೆದೆರಡು ದಿನಗಳಿಂದ ಸೇನೆ ಮತ್ತು ಅರೆಸೇನಾ ಪಡೆ ನಡುವಿನ ತೀವ್ರವಾದ ಘರ್ಷಣೆ ಮುಂದುವರಿದಿದ್ದು, ಈವರೆಗಿನ ಸಾವಿನ ಸಂಖ್ಯೆ 180ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 1800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಘಟನೆಯಿಂದಾಗಿ ದೇಶದಾದ್ಯಂತ ಅಶಾಂತಿ, ಉದ್ವಿಗ್ನ ಸ್ಥಿತಿ ಮೂಡಿದೆ.
ಒಂಡರ್ಮನ್ ನಗರ, ದಕ್ಷಿಣ ಡಾರ್ಫರ್, ನ್ಯಾಲಾ, ರಾಜಧಾನಿ ಖಾರ್ಟೂಮ್ ಸೇರಿ ವಿವಿಧ ನಗರಗಳನ್ನು ಸೇನೆ ಮತ್ತು ಅರೆಸೇನಾಪಡೆ (ಆರ್‌ಎಸ್‌ಎಫ್) ಶಸ್ತ್ರಸಜ್ಜಿತ ವಾಹನಗಳು, ಮಷೀನ್‌ಗನ್ ಜೋಡಿಸಲಾದ ಟ್ರಕ್‌ಗಳು ಆವರಿಸಿಕೊಂಡಿವೆ. ಅಲ್ಲಲ್ಲಿ ಸೇನೆ ಮತ್ತು ಅರೆಸೇನಾಪಡೆ ನಡುವೆ ಗುಂಡಿನ ಕಾಳಗ ನಡೆಯುತ್ತಿದ್ದು, ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸೇನೆ ಮತ್ತು ಅರೆಸೇನಾಪಡೆ (ಆರ್‌ಎಸ್‌ಎಫ್) ನಡುವೆ ಅಧಿಕಾರಕ್ಕಾಗಿ ಮೂಡಿರುವ ಘರ್ಷಣೆ ಇನ್ನಷ್ಟು ಉಲ್ಬಣಗೊಂಡಿದೆ.