ಹೊಸದಿಗಂತ ಡಿಜಿಟಲ್ ಡೆಸ್ಕ್:
1,400 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜಕಾರಣ ಕುಬೇರ ಎನ್ನಲಾಗಿತ್ತು. ಆದರೆ ಇದೀಗ ಇವರನ್ನೂ ಮೀರಿದ ಆಸ್ತಿ ದಾಖಲೆ ಹೊಂದಿರುವ ರಾಜಕಾರಣಿ ಎಂಟಿಬಿ ನಾಗರಾಜ್ ಆಗಿದ್ದಾರೆ.
ಸಚಿವ ಎಸ್. ನಾಗರಾಜ್ ಅವರು 1,609 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಮೂರು ವರ್ಷದಲ್ಲಿ 400 ಕೋಟಿ ರೂಪಾಯಿ ಆಸ್ತಿ ಹೆಚ್ಚಾಗಿದೆ.
2018 ರಲ್ಲಿ ನಾಗರಾಜ್ ಆಸ್ತಿ 1,200 ಕೋಟಿ ರೂಪಾಯಿಯಾಗಿತ್ತು. ಇದೀಗ ಆಸ್ತಿ 1,600 ಕೋಟಿ ದಾಟಿದೆ.