ಹೊಸದಿಗಂತ ವರದಿ, ಮೈಸೂರು:
ಕರ್ನಾಟಕವನ್ನು ಕಾಂಗ್ರೆಸ್ನವರು ಮತ್ತೆ ಎಟಿಎಂ ಮಾಡಿಕೊಳ್ಳಲು ರಾಜ್ಯದ ಜನರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ನೀಡಬಾರದು ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ರಾಜ್ಯಸಭಾ ಸದಸ್ಯ ಸುಧಾಂಶು ತ್ರೀವೇದಿ ಹೇಳಿದರು.
ಬುಧವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ತಮ್ಮ ಆಡಳಿತದಲ್ಲಿ ಕರ್ನಾಟಕವನ್ನು ಎಟಿಎಂ (ಎನಿಟೈಮ್ ಮನಿ ವರ್ಗಾವಣೆ) ಮಾಡಿಕೊಂಡು, ರಾಜ್ಯವನ್ನು ಲೂಟಿ ಹೊಡೆದಿದ್ದರು. ಈಗ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ. ಅದಕ್ಕೆ ರಾಜ್ಯದ ಜನರು ಈ ಚುನಾವಣೆಯಲ್ಲಿ ಅವಕಾಶ ನೀಡಬಾರದು. ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಾರದು ಎಂದರು.
ಚುನಾವಣೆಗಳು ಹತ್ತಿರ ಬಂದಾಗಲೆಲ್ಲಾ ಕಾಂಗ್ರೆಸ್ನವರು ಜನರಿಗೆ ಈಡೇರಿಸಲಾಗದಂತಹ ಆಕಷಕವಾದ ಸುಳ್ಳು ಭರವಸೆಗಳನ್ನು ನೀಡುವುದನ್ನು ಕಾಂಗ್ರೆಸ್ನವರು ರೂಢಿಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಿಕೆ, 10 ಕೆ.ಜಿ ಅಕ್ಕಿ, ಗೃಹಿಣಿಗೆ 2 ಸಾವಿರರೂ ಹೀಗೆ ಅನೇಕ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜನರನ್ನು ಮರಳು ಮಾಡಿ, ಅಧಿಕಾರಕ್ಕೆ ಬರಬೇಕೆಂಬ ಪ್ರಯತ್ನವನ್ನು ಕಾಂಗ್ರೆಸ್ನವರು ನಡೆಸುತ್ತಿದ್ದಾರೆ. ಹಿಮಾಚಲ, ರಾಜಸ್ಥಾನ, ಛತ್ತೀಸ್ಗಡ್ ಮುಂತಾದ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಇದೇ ರೀತಿಯ ಸುಳ್ಳು ಭರವಸೆಗಳನ್ನ ಚುನಾವಣೆಯ ಸಂರ?ಭದಲ್ಲಿ ನೀಡಿದ್ದರು, ಆದರೆ ಅಧಿಕಾರಕ್ಕೆ ಬಂದು ಹಲವು ತಿಂಗಳಾದರೂ ನೀಡಿದ್ದ ಭರವಸೆಗಳಲ್ಲಿ ಒಂದನ್ನೂ ಇಲ್ಲಿಯ ತನಕ ಜಾರಿಗೆ ತರಲು ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಅಧಿಕಾರಕ್ಕೆ ಬರಲು ಸುಳ್ಳು ಭರವಸೆಗಳನ್ನು ನೀಡುತ್ತಿರುವ ಕಾಂಗ್ರೆಸ್ನವರಿಗೆ ನಾಟಕ ರಾಜ್ಯದ ಜನರು ತಕ್ಕ ಪಾಠವನ್ನು ಕಲಿಸಬೇಕು ಎಂದು ಹೇಳಿದರು. ಕಾಂಗ್ರೆಸ್ವರು ಬಿಜೆಪಿ ಸರ್ಕಾರ ಶೇ 40ರಷ್ಟು ಕಮಿಷನ್ ಪಡೆಯುವ ಭ್ರಷ್ಟ ಸರಕಾರ ಎ೦ದು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಈ ಆರೋಪಕ್ಕೆ ಸಂಬ೦ಧಿಸಿದ೦ತೆ ಯಾವುದೇ ದಾಖಲಾತಿಗಳನ್ನು ನೀಡುತ್ತಿಲ್ಲ. ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಕೇಂದ್ರದಿoದ ಒಂದು ರೂಪಾಯಿ ಕೊಟ್ಟರೆ ಫಲಾನುಭವಿಗಳಿಗೆ ಕೇವಲ 15 ಪೈಸೆ ಮಾತ್ರ ತಲುಪುತ್ತಿದೆ. ಉಳಿದ 85 ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ಹೇಳಿದರು. ಅವರ ಕಾಲದಿಂದಲೂ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ 85% ಕಮಿಷನ್ ಭ್ರಷ್ಟಾಚಾರ ಇತ್ತು ಎಂಬುದನ್ನು ಸ್ವತಃ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರೇ ಒಪ್ಪಿಕೊಂಡಿದ್ದಾರೆ. ಇದನ್ನು ಕಾಂಗ್ರೆಸ್ನವರು ಮಾತ್ರವಲ್ಲ, ಈ ದೇಶದ ಜನರು ಕೂಡ ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರಗಳು 85% ಕಮಿಷನ್ ಪಡೆಯುವ ಭ್ರಷ್ಟ ಸರ್ಕಾರಗಳು ಎಂದು ಟೀಕಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ಎಂಟು ವರ್ಷಗಳಿಂದ ಡಿಬಿಟಿ ಯ ಮುಖಾಂತರ ನೇರ ನಗದು ಫಲಾನುಭವಗಳಿಗೆ ತಲುಪುತ್ತಿದ್ದು. ನೂರಕ್ಕೆ ನೂರು ರೂಪಾಯಿ ಫಲಾನುಭವಿಗಳಿಗೆ ಸಿಗುತ್ತಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ತಲುಪುತ್ತಿರುವ ಐತಿಹಾಸಿಕ ದಾಖಲೆ ಎಂದು ತಿಳಿಸಿದರು.