Sunday, December 14, 2025

ದಿನಭವಿಷ್ಯ: ಭಾವನಾತ್ಮಕ ಅಡೆತಡೆಗಳಿದ್ದರೂ, ಕಾರ್ಯಕ್ಷೇತ್ರದಲ್ಲಿ ಇಂದು ನಿಮ್ಮದೇ ಜಯ!

ಮೇಷ.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ. ಆತ್ಮವಿಶ್ವಾಸ ಹೆಚ್ಚಳ. ಕುಟುಂಬಸ್ಥರ ಇಷ್ಟಾರ್ಥ ಈಡೇರಿಸಲು ಹೆಚ್ಚು ಹಣ ವ್ಯಯವಾದೀತು.
ವೃಷಭ
ಸಮಸ್ಯೆ ರಹಿತ ದಿನವಾಗಿ ಕಂಡರೂ ಹೊಸ ಸಮಸ್ಯೆಯೊಂದು ನಿಮಗೆ ಅರಿವಿಲ್ಲದೆ ರೂಪುಗೊಳ್ಳುತ್ತಿದೆ. ಎದುರಿಸಲು ಸನ್ನದ್ಧರಾಗಿ.
ಮಿಥುನ
ಇಷ್ಟಾರ್ಥ ಸಾಧಿಸಲು ಸಫಲ. ಮನೆಯಲ್ಲಿ ಒಮ್ಮತ ಸಾಽಸಲು ಶಕ್ತರಾಗುವಿರಿ. ವೃತ್ತಿಯಲ್ಲಿ ತೃಪ್ತಿಕರ ದಿನ. ಕೆಲಸದ ಗೊಂದಲ ನಿವಾರಣೆ.
ಕಟಕ
ಏಕತಾನತೆಯ ಕೆಲಸ ನೀರಸ ಅನಿಸಬಹುದು. ಉತ್ಸಾಹದ ದಿನವಾಗಿ ಪರಿವರ್ತಿಸಲು ಯತ್ನಿಸಿ. ನಡೆನುಡಿಯಲ್ಲಿ ಹೊಸತನ ರೂಢಿಸಿಕೊಳ್ಳಿ.
ಸಿಂಹ
ಪೂರ್ವಗ್ರಹದಿಂದ ವರ್ತಿಸಬೇಡಿ. ಪರಿಸ್ಥಿತಿಗೆ ತಕ್ಕಂತೆ ಸ್ಪಂದಿಸಿ. ವಿರೋಽಗಳೇ ನೆರವಿಗೆ ಬಂದಾರು. ಆಪ್ತರಿಂದಲೇ ವಂಚನೆ ನಡೆದೀತು.
ಕನ್ಯಾ
ಉದ್ವಿಗ್ನತೆ ಕಳೆದು ಉತ್ಸಾಹದ ಪರಿಸರ ನಿರ್ಮಾಣ. ಭಾವನೆ ನಿಯಂತ್ರಿಸಿ. ಆತುರದ ತೀರ್ಮಾನ ಪ್ರತಿಕೂಲ ಪರಿಣಾಮ ತಂದೀತು.
ತುಲಾ
ಕೆಲವು ದಿನಗಳ ಒತ್ತಡ ಕಳೆದು ನಿರಾಳತೆ. ಶೇರು ಹೂಡಿಕೆ ಅಥವಾ ಲಾಟರಿಯಲ್ಲಿ ಲಾಭ. ಪ್ರೀತಿಯ ಅಹವಾಲಿಗೆ ಗುಣಾತ್ಮಕ ಸ್ಪಂದನೆ ಲಭ್ಯ.
ವೃಶ್ಚಿಕ
ದಿನವಿಡೀ ಸಮಸ್ಯೆ ಪರಿಹರಿಸುವಲ್ಲೇ ಸಮಯ ಕಳೆಯುವಿರಿ. ಪ್ರೀತಿಯ ವಿಷಯದಲ್ಲಿ ಉದ್ವಿಗ್ನ ಸ್ಥಿತಿ ಎದುರಿಸುವಿರಿ. ಸಹನೆ, ವಿವೇಕದಿಂದ ನಡಕೊಳ್ಳಿ.
ಧನು
ಕೆಲವು ಕಾರಣಕ್ಕೆ ಉದ್ವಿಗ್ನತೆ ಎದುರಿಸುವಿರಿ. ಸಂಬಂಧದಲ್ಲಿ ಏರುಪೇರು ಉಂಟಾದೀತು. ಜಿಗುಟು ಧೋರಣೆ ಬಿಡಿ. ಹೊಂದಾಣಿಕೆ ಮುಖ್ಯ.
ಮಕರ
ಕೆಲವು ವಿಽಗಳಲ್ಲಿ ನಿಮಗಿಂದು ಅದೃಷ್ಟದ ದಿನ. ಅಭೀಷ್ಟ ಸಿದ್ಧಿ. ಸಮಸ್ಯೆ ಪರಿಹಾರ. ಪ್ರತಿಕೂಲ ಪರಿಸ್ಥಿತಿ ಪೂರಕ ವಾಗಿ ಬದಲಾಗಲಿದೆ.
ಕುಂಭ
ಸಾಧಾರಣ ಯಶಸ್ಸಿನ ದಿನ. ಏಳುಬೀಳು ಎರಡನ್ನೂ ಎದುರಿಸುವಿರಿ. ಅನವಶ್ಯ ವೆಚ್ಚ ತಗ್ಗಿಸಿರಿ. ಮನೆ ಅಥವಾ ವಾಹನ ದುರಸ್ತಿಯ ಸಂಭವ.
ಮೀನ
ಉಪಯುಕ್ತ ಕಾರ್ಯಕ್ಕೆ ದಿನ ಬಳಸಿ. ಪ್ರಯೋಜನಕ್ಕೆ ಬಾರದ ವಿಷಯದಲ್ಲಿ ತೊಡಗದಿರಿ. ಆರೋಗ್ಯದಲ್ಲಿ ತುಸು ಏರುಪೇರು ಸಂಭವ.

error: Content is protected !!