ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಎಲ್ಲ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ಬ್ಯುಸಿ ಆಗಿವೆ. ಇದರ ನಡುವೆ ಈಗ ಐಪಿಎಲ್ ಶುರುವಾಗಿದ್ದು, ಜನರಿಗೆ ಮತ್ತಷ್ಟು ಸಂಭ್ರಮ.
ಇಂದು ಆರ್ಸಿಬಿ ತಂಡ ಬೆಂಗಳೂರಿನಲ್ಲಿ ಪಂದ್ಯವಾಡಿದ್ದು, ಎಲ್ಲಡೆ ಜನರು ಪಂದ್ಯವನ್ನು ಸಂಭ್ರಮಿಸಿದ್ದರು. ಇದರ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಣಿಸಿದ್ದು ಪ್ರಧಾನಿ ಮೋದಿ,ಸಿಎಂ ಬಸವರಾಜ್ ಬೊಮ್ಮಾಯಿ.
ಹೌದು, .ಇಂದುಆರ್ಸಿಬಿ ರಾಜಸ್ಥಾನ ನಡುವಿನ ಪಂದ್ಯದ ವೇಳೆ ಅಭಿಮಾನಿಗಳು ಪ್ರಧಾನಿ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ ಟಿಶರ್ಟ್ ಧರಿಸಿ ಪಂದ್ಯಕ್ಕೆ ಆಗಮಿಸಿ ಚಿಯರ್ ಅಪ್ ಮಾಡಿದ್ದರು.
ಹಲವು ಅಭಿಮಾನಿಗಳು ಮೋದಿ(MODI) ಹೆಸರಿನ ಅಕ್ಷಗಳ ಟಿಶರ್ಟ್ ಧರಿಸಿ ಆಗಮಿಸಿದ್ದರು. ಕೇಸರಿ ಟಿಶರ್ಟ್ ಮೇಲೆ ಮೋದಿ ಹೆಸರಿನ ಟಿಶರ್ಟ್ ರಾರಾಜಿಸಿತ್ತು. ಮತ್ತೆ ಕೆಲ ಅಭಮಾನಿಗಳು ಪ್ರಧಾನಿ ಮೋದಿ ಹಾಗೂ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಭಾವಚಿತ್ರದ ಟಿಶರ್ಟ್ ಧರಿಸಿ ಆಗಮಿಸಿದ್ದರು. ಈ ಟಿಶರ್ಟ್ ಮೇಲೆ ಸಿಎಂ ಕ್ರ್ಯೂ ಎಂದು ಬರೆಯಲಾಗಿತ್ತು.
ಜೊತೆಗೆ ಇತ್ತ ಅಭಿಮಾನಿಗಳು ಕ್ರೀಡಾಂಗಣದ ಹೊರಭಾಗದಲ್ಲಿ ಪ್ರಧಾನಿ ಮೋದಿ ಹಾಗೂ ಬೊಮ್ಮಾಯಿ ಪರ ಘೋಷಣೆ ಕೂಗಿದ್ದಾರೆ. ಇಂದಿನ ಪಂದ್ಯದಲ್ಲಿ ಹಲವು ವಿಶೇಷತೆಗಳು ನೋಡುಗರ ಗಮನಸೆಳೆದಿದೆ.