ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಟಿ ಚೆನ್ನಾಗಿರಬೇಕಲ್ವಾ…ಈ ಆಸೆ ಪುರಷರಿಗಿಂತಲೂ ಮಹಿಳೆಯರಿಗೇ ಜಾಸ್ತಿ!. ಅಂದವಾದ ತುಟಿ ಪಡೆಯುವುದು ಪುಣ್ಯ. ಆ ತುಟಿಗಳ ಅಂದವನ್ನು ಕಾಪಾಡುವುದು ಪ್ರಾಮುಖ್ಯ. ಹಾಗಾದ್ರೆ ಸಿಂಪಲ್ಲಾಗಿ ತುಟಿಯ ಅಂದವನ್ನು ಹೇಗೆ ಕಾಪಾಡಬಹುದು ಎಂದು ತಿಳಿದುಕೊಳ್ಳೋಣ.
ಕೆಲವರ ತುಟಿಗಳ ಮೇಲೆ ಅತಿಯಾದ ಸುಕ್ಕುಗಳಿರುತ್ತದೆ. ಇದರಿಂದ ತುಟಿಯ ಅಂದ ಹಾಳಾಗಿ ವಿಕಾರವಾಗಿ ಕಾಣುತ್ತದೆ. ಅದನ್ನು ಮರೆಮಾಚಲು ಲಿಪ್ ಸ್ಟಿಕ್ ಮೊರೆಹೋಗುತ್ತದೆ. ಅವುಗಳಿಗೆ ಗುಡ್ ಬೈ ಹೇಳಿ. ಮನೆಯಲ್ಲೇ ಸಿಂಪಲ್ಲಾಗಿ ಮಾಡುವ ಕೆಲವು ಟಿಪ್ಸ್ ನಾವು ನಿಮಗೆ ನೀಡುತ್ತೇವೆ.ಈ ಟಿಪ್ಸ್ ನಿಮ್ಮ ತುಟಿಯ ಸುಕ್ಕುಗಳನ್ನು ತೊಡೆದುಹಾಕಬಹುದು. ಈ ಮೂಲಕ ನಯವಾದ ಮತ್ತು ಮೃದುವಾದ ತುಟಿಗಳನ್ನು ಪಡೆಯಬಹುದು.
ಪ್ರತಿದಿನ ನೀವು ಸ್ನಾನದ ನಂತರ, ನಿಮ್ಮ ತುಟಿಗಳಿಗೆ ಸ್ವಲ್ಪ ಆಲಿವ್ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ತುಟಿಗಳ ಮೇಲಿನ ಸುಕ್ಕುಗಳು ಮಾಯವಾಗುತ್ತವೆ. ಆಲಿವ್ ಎಣ್ಣೆಯಲ್ಲಿರುವ ಆಮ್ಲಗಳು ತುಟಿಗಳ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪರಿಶುದ್ಧವಾದ ತೆಂಗಿನೆಣ್ಣೆಯನ್ನು ನಿಮ್ಮ ತುಟಿಗಳಿಗೆ ಮೂರು ಬಾರಿ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ಅತಿನೇರಳಾತೀತ ಕಿರಣಗಳಿಂದ ನಿಮ್ಮ ತುಟಿಯನ್ನು ಇದು ರಕ್ಷಿಸುತ್ತದೆ. ಹಾಗೂ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಅಲೋವೇರ ಜೆಲ್ ಕೂಡಾ ತುಟಿಯ ಆರೋಗ್ಯವನ್ನು ಹೆಚ್ಚಿಸುತ್ತದೆ. ದಿನಕ್ಕೆ ಮೂರು ಬಾರಿ ಅಲೋವೇರ ಜೆಲ್ ನಿಂದ ಮೃದುವಾಗಿ ಮಸಾಜ್ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.