5 ಕೊರಿಯನ್ ಮಹಿಳೆಯರಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಪ್ರಕರಣ: ಆಸ್ಟ್ರೇಲಿಯಾದಲ್ಲಿ ಭಾರತೀಯನಿಗೆ ಶಿಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೊರಿಯಾದ ಐವರು ಮಹಿಳೆಯರಿಗೆ ಮಾದಕವಸ್ತು ನೀಡಿ ಅವರ ಮೇಲೆ ಅತ್ಯಾಚಾರ ಎಸಗಿದ್ದ ಭಾರತ ಮೂಲದ ವ್ಯಕ್ತಿಗೆ ಆಸ್ಟ್ರೇಲಿಯಾದಲ್ಲಿ ಶಿಕ್ಷೆ ವಿಧಿಸಲಾಗಿದೆ. ಈತ ತನ್ನ ಕೃತ್ಯಗಳನ್ನು ಹಿಡನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದ. ಸಿಡ್ನಿಯಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಆಘಾತಕಾರಿ ಕೆಲವು ವಿಡಿಯೋಗಳನ್ನು ವೀಕ್ಷಿಸಿದ ಬಳಿಕ ಧನ್​ಕರ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ.

ಆಸ್ಟ್ರೇಲಿಯಾದಲ್ಲಿನ ಭಾರತೀಯ ಸಮುದಾಯದಲ್ಲಿ ರಾಜಕೀಯ ನಂಟುಗಳ ಕಾರಣದಿಂದ ಪ್ರಭಾವಿ ವ್ಯಕ್ತಿಯಾಗಿದ್ದ ಬಾಲೇಶ್ ಧನಕರ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. 2018ರ ಜನವರಿಯಿಂದ ಅಕ್ಟೋಬರ್‌ ಅವಧಿಯಲ್ಲಿ ನಡೆಸಿದ ಅತ್ಯಾಚಾರಗಳ 13 ಪ್ರಕರಣಗಳು ಸೇರಿ 39ಕ್ಕೂ ಹೆಚ್ಚು ಆರೋಪಗಳನ್ನು ಬಾಲೇಶ್ ಎದುರಿಸಿದ್ದ. ಸಿಡ್ನಿಯಲ್ಲಿನ ಜಿಲ್ಲಾ ನ್ಯಾಯಾಲಯವು ಸೋಮವಾರ ಆತನನ್ನು ಎಲ್ಲ ಆರೋಪಗಳಲ್ಲಿಯೂ ತಪ್ಪಿತಸ್ಥ ಎಂದು ಹೇಳಿದೆ.

ಆತನ ವಿರುದ್ಧದ ಎಲ್ಲ 39 ಪ್ರಕರಣಗಳಲ್ಲಿ ಆತ ಅಪರಾಧಿ ಎಂದು ನ್ಯಾಯಾಧೀಶರು ತೀರ್ಪು ನೀಡುತ್ತಿದ್ದಂತೆ ಆತ ನ್ಯಾಯಾಲಯದಲ್ಲಿಯೇ ಕಣ್ಣೀರಿಟ್ಟಿದ್ದಾನೆ. 43 ವರ್ಷದ ಡೇಟಾ ಪರಿಣತನಾಗಿರುವ ಬಾಲೇಶ್, ಮೇ ತಿಂಗಳಲ್ಲಿ ಮತ್ತೆ ಕೋರ್ಟ್‌ಗೆ ಹಾಜರಾಗಬೇಕಿದ್ದು, ಆತನ ಶಿಕ್ಷೆಯ ಪ್ರಮಾಣ ನಂತರ ಪ್ರಕಟವಾಗುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!