ರಾಜ್ಯ ಚುನಾವಣೆ: ಈ ವರ್ಷ ಮತದಾರರ ಸಂಖ್ಯೆ ಎಷ್ಟು? ಎಷ್ಟು ಜನರಿಗೆ ಮನೆಯಿಂದ ವೋಟ್? ಇಲ್ಲಿದೆ ಸಂಪೂರ್ಣ ಮಾಹಿತಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಚುನಾವಣೆಗೆ ಪಕ್ಷಗಳು ಅಖಾಡಕ್ಕೆ ಇಳಿದು ಭರ್ಜರಿ ಪ್ರಚಾರ ನಡೆಸುತ್ತಿದ್ದು,ಇತ್ತ ಇಲಾಖೆಗಳು ಭರದ ಸಿದ್ಧತೆ ನಡೆಸುತ್ತಿದೆ.
ಇದೀಗ ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಬುಧವಾರ ಬಹಿರಂಗಪಡಿಸಿದರು. ಈ ಬಾರಿ ಎಷ್ಟು ಮಂದಿ ಹೊಸ ಮತದಾರರಿದ್ದಾರೆ? ಮನೆಯಿಂದಲೇ ಮತದಾನ ಮಾಡುವವರು ಎಷ್ಟು ಮಂದಿ? ಎಷ್ಟು ನಗದು, ಉಡುಗೊರೆ ವಸ್ತುಗಳ ಜಪ್ತಿ ಮಾಡಲಾಗಿದೆ ಇತ್ಯಾದಿ ವಿವರಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದರು.

ಈ ಬಾರಿ ರಾಜ್ಯದಲ್ಲಿ ಒಟ್ಟಾರೆ 5,30,85,566 ಮತದಾರರು ಇದ್ದು, ಪುರುಷ ಮತದಾರರ ಸಂಖ್ಯೆ 2,66,82,156 ಹಾಗೂ ಮಹಿಳಾ ಮತದಾರರ ಸಂಖ್ಯೆ 2,63,98,483 ಆಗಿದೆ.

ಅದೇ ರೀತಿ ಈ ಬಾರಿ 16,04,285 ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಹೊಸದಾಗಿ ಸೇರ್ಪಡೆಯಾದವರಲ್ಲಿ 11,71,558 ಯುವ ಮತದಾರರಾಗಿದ್ದು, 18-19 ವಯಸ್ಸಿನವರಾಗಿದ್ದಾರೆ.

2022ರ ಸೆಪ್ಟೆಂಬರ್ 1 ರಿಂದ 38 ಲಕ್ಷ ವೋಟರ್ ಐಡಿ ನೀಡಲಾಗಿದೆ.ರಾಜ್ಯದಲ್ಲಿ 58,545 ಪೋಲಿಂಗ್ ಸ್ಟೇಷನ್ ಸ್ಥಾಪಿಸಲಾಗುವುದು.1,15,709 ಇವಿಎಂ, 89379 ವಿವಿಪ್ಯಾಟ್ ಯಂತ್ರ ಅಳವಡಿಸಲಾಗುವುದು.47,488 ಯೋಧರಿಗೆ ಅಂಚೆ ಮತಪತ್ರಗಳನ್ನು ಕಳುಹಿಸಲಾಗಿದೆ.80 ವರ್ಷ ದಾಟಿದ 80,250 ಜನರು ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿದ್ದಾರೆ.ಪ್ರತಿ ಬೂತ್ ನಲ್ಲಿ ನೋಂದಾಯಿಸಿದ ಮತದಾರರಿಗೆ ಪೂರ್ವ ಮಾಹಿತಿ ನೀಡಲಾಗುವುದು.19279 ವಿಕಲ ಚೇತನರು, 13771 ಅಗತ್ಯ ಸೇವೆ ಒದಗಿಸುವವರು ನೋಂದಾಯಿಸಿದ್ದಾರೆ ಎಂದರು.

80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ
ಇಲ್ಲಿ ಮತದಾನ ಸಿಬ್ಬಂದಿ, ಪೊಲೀಸರು, ಪೋಲಿಂಗ್ ಏಜೆಂಟ್ ಮನೆಯಿಂದಲೇ ಮತದಾನ ಪ್ರಕ್ರಿಯೆಗಾಗಿ ಅರ್ಜಿ ಸಲ್ಲಿಸಿದವರ ಮನೆಗೆ ತೆರಳಲಿದ್ದಾರೆ. ಮತಪತ್ರದ ಮೂಲಕ ಮತದಾನ ಮಾಡಬಹುದಾಗಿದೆ. ಮನೆಯಿಂದಲೇ ಮತದಾನದ ವಿಡಿಯೋಗ್ರಾಫ್ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

265 ಕೋಟಿ ರೂ. ಜಪ್ತಿ
ಅನಧಿಕೃತ ರ‍್ಯಾಲಿಗಳ ಸಂಬಂಧ ಈವರೆಗೆ 53 ಎಫ್ಐಆರ್ ದಾಖಲಿಸಲಾಗಿದೆ. ಗುಂಪು ಘರ್ಷಣೆ ಸಂಬಂಧ 15 ಎಫ್ಐಆರ್ ಹಾಗೂ ದ್ವೇಷ ಭಾಷಣ ಸಂಬಂಧ 5 ಎಫ್ಐಆರ್ ಸೇರಿದಂತೆ ಒಟ್ಟು 673 ಎಫ್ಐಆರ್​ಗಳನ್ನು ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 265 ಕೋಟಿ ರೂ. ಹಣ ವಶಪಡಿಸಿಕೊಳ್ಳಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!