ಛತ್ತೀಸ್‌ಗಢದಲ್ಲಿ 10 ಯೋಧರ ಹುತಾತ್ಮ: ಅವರ ತ್ಯಾಗ ಸದಾ ನೆನಪಿನಲ್ಲಿ ಉಳಿಯಲಿದೆ, ಪ್ರಧಾನಿ ಮೋದಿ ಸಂತಾಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಛತ್ತೀಸ್‌ಗಢದಲ್ಲಿ ದಾಂತೆವಾಡಾ ಜಿಲ್ಲೆಯಲ್ಲಿ ನಕ್ಸಲರ ಐಇಡಿ ಸ್ಫೋಟದಲ್ಲಿ ಸಾವನ್ನಪ್ಪಿದ 10 ಜನ ಮೀಸಲು ಪೊಲೀಸರಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ಮೂಲಕ ಸಂತಾಪ ವ್ಯಕ್ತ ಪಡಿಸಿದರುವ ಪ್ರಧಾನಿ, ಯೋಧರ ಮೇಲೆ ನಡೆದ ದಾಳಿಯನ್ನ ಬಲವಾಗಿ ಖಂಡಿಸುತ್ತೇನೆ.ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಸಿಬ್ಬಂದಿಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.’ಅವರ ತ್ಯಾಗ ಸದಾ ನೆನಪಿನಲ್ಲಿ ಉಳಿಯಲಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು’ ಎಂದು ಹೇಳಿದ್ದಾರೆ.

ದಾಂತೇವಾಡದಲ್ಲಿ ಮಾವೋವಾದಿಗಳು ನಡೆಸಿದ ಐಇಡಿ ಸ್ಫೋಟದಲ್ಲಿ ಡಿಆರ್ಜಿ ಯೋಧರು ಮತ್ತು ಒಬ್ಬ ನಾಗರಿಕ ಸೇರಿದಂತೆ ಒಟ್ಟು 11 ಜನರು ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!