ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ, ಬಿಜೆಪಿಗೆ ಆಶೀವ೯ದಿಸಿ: ಮಣಿಕಂಠ್ ರಾಠೋಡ್ ಪ್ರಚಾರ

ಹೊಸದಿಗಂತ ವರದಿ, ಕಲಬುರಗಿ:

ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡದ ಕಾಂಗ್ರೆಸ್ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ತೀರಸ್ಕರಿಸುವ ಮೂಲಕ ಬಿಜೆಪಿಗೆ ಆಶೀರ್ವಾದ ಮಾಡಬೇಕೆಂದು ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ್ ರಾಠೋಡ್ ಹೇಳಿದರು.

ಬುಧವಾರ ಚಿತ್ತಾಪುರ ತಾಲೂಕಿನ ಸನ್ನತಿಯ ಸುಪ್ರಸಿದ್ಧ ಚಂದ್ರಲಾಂಭ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗ್ರಾಮಸ್ಥರನ್ನು ಭೇಟಿ ಮಾಡಿ ಮಾತನಾಡಿದರು.

ಕಳೆದ ಒಂದು ದಶಕದಿಂದ ಶಾಸಕರು ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ನೀಡದೆ,ನಿಲ೯ಕ್ಷತನ ತೋರಿದ್ದಾರೆ. ಹೀಗಾಗಿ ಮುಂಬರುವ ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೀರಸ್ಕರಿಸುವ ಮೂಲಕ ನನಗೆ ಆಶೀರ್ವಾದ ಮಾಡಬೇಕು ಎಂದರು.

ಚುನಾಯಿತನಾದರೇ,ನಿಮ್ಮ ಪ್ರತಿಯೊಂದು ಕೆಲಸವನ್ನು ನನ್ನ ಮನೆಯ ಕೆಲಸವೆಂದು ಭಾವಿಸಿ, ಪ್ರಾಮಾಣಿಕವಾಗಿ ಮಾಡಿಸಿ,ಕ್ಷೇತ್ರದ ಅಭಿವೃದ್ಧಿ ಕಾಯ೯ಕ್ಕೆ ಸ್ಪಂಧಿಸುತ್ತೇನೆ ಎಂದು ಹೇಳಿದರು.

ಇನ್ನೂ ಚಿತ್ತಾಪುರ ತಾಲೂಕಿನ ಕನಗನಹಳ್ಳಿ, ಹೂಳಂಡಗೇರಾ ತಾಂಡಾ,ಬನ್ನಟ್ಟಿ, ಕೊಳ್ಳುರು, ತರಕಸ್ ಪೇಟೆ ತಾಂಡಾ, ರಾಮಪೂರ ಹಳ್ಳಿ, ಶಾಮಪೂರ ಹಳ್ಳಿ,ಮಾರಡಗಿ,ಕುಲಕುಂದಿ,ಕಡಬೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ ಮಾಡುವ ಮೂಲಕ ಹಾಗೂ ಪ್ರಚಾರ ಸಭೆ ಮೂಲಕ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಸವರಾಜ ಶಿವಗೋಳ,ಬಸವರಾಜ ಬೆಣ್ಣೂರ, ಮಲ್ಲಿಕಾರ್ಜುನ ಎಮ್ಮಿಗನೂರ್, ಧಮ೯ಣ್ಣಾ ಇಟಗಾ,ಮಹೇಶ್ ಗೌಳಿ,ಮುಕುಂದ ದೇಶಪಾಂಡೆ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಕಾಯ೯ಕತ೯ರು ಸಾಥ್ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!