ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೆನ್ನೈನ ಹೊಟೇಲ್‌ವೊಂದರಲ್ಲಿ ದುರಂತ ಸಂಭವಿಸಿದ್ದು, ಕುದಿಯುತ್ತಿದ್ದ ಬಿಸಿ ಸಾಂಬಾರ್ ಪಾತ್ರೆಗೆ ವಿದ್ಯಾರ್ಥಿಯೊಬ್ಬ ಬಿದ್ದು ಮೃತಪಟ್ಟಿದ್ದಾನೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ದುರ್ಘಟನೆ ನಡೆದಿದ್ದು, ಓದಿಗೆ ಹಣ ಕೂಡಿಸಲು ವಿದ್ಯಾರ್ಥಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ. ಹೊಟೇಲ್‌ನಲ್ಲಿ ಮದುವೆ ಸಮಾರಂಭಕ್ಕಾಗಿ ಆಹಾರ ತಯಾರಿಸುವ ವೇಳೆ ಅನಾಹುತ ಸಂಭವಿಸಿದೆ.
ಅತಿಥಿಗಳಿಗೆ ಸಾಂಬಾರ್ ಬಡಿಸಲು ಸಣ್ಣ ಬಕೆಟ್‌ನಿಂದ ಸಾಂಬಾರ್‌ನ್ನು ತೆಗೆಯಲು ವಿದ್ಯಾರ್ಥಿ ಯತ್ನಿಸಿದ್ದಾನೆ. ಈ ವೇಳೆ ಪಾತ್ರೆಯ ಒಳಗೇ ಆತ ಬಿದ್ದು ಮೃತಪಟ್ಟಿದ್ದಾನೆ. ತೀವ್ರ ಸುಟ್ಟ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.