ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಗ್ರಾಮೀಣದಲ್ಲಿ ಇಂದು ನಡೆಯಬೇಕಿದ್ದ ನಟ ಕಿಚ್ಚ ಸುದೀಪ್ ಅವರ ರೋಡ್ ಶೋ ದಿಢೀರ್ ರದ್ದಾಗಿದೆ.
ನಟ ಕಿಚ್ಚ ಸುದೀಪ್ ಇಂದು ಬೆಳಗಾವಿಯ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಬೆಳಗಾವಿ ಗ್ರಾಮೀಣದ ರೋಡ್ ಶೋ ಕೊನೇ ಕ್ಷಣದಲ್ಲಿ ರದ್ದಾಗಿದೆ.
ಬಿಜೆಪಿ ಅಭ್ಯರ್ಥಿ ಪರ ಕಿಚ್ಚ ಸುದೀಪ್ ತಾರಿಹಾಳದಲ್ಲಿ ಇಂದು ಪ್ರಚಾರ ಮಾಡಬೇಕಿತ್ತು. ಆದರೆ ತಾರಿಹಾಳ ಗ್ರಾಮದಲ್ಲಿ ಯುವಕನ ಕೊಲೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕಿಚ್ಚ ಸುದೀಪ್ ರೋಡ್ ಶೋ ರದ್ದು ಮಾಡಲಾಗಿದೆ.