ಮೇ 3-4 ರಂದು ಗೋ ಫರ್ಸ್ಟ್‌ ಏರ್‌ ಲೈನ್ಸ್‌ ನ ಎಲ್ಲಾ ವಿಮಾನಗಳು ರದ್ದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇ 3 ಮತ್ತು 4 ರಂದು ಗೋ ಫರ್ಸ್ಟ್‌ ಏರ್‌ಲೈನ್ಸ್‌ನ ಎಲ್ಲಾ ವಿಮಾನಗಳು ರದ್ದುಗೊಳ್ಳಲಿವೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ತಿಳಿಸಿದೆ .

ಮೇ 3 ಮತ್ತು 4 ರಂದು ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗುವುದು ಎಂದು ಗೋ ಫಸ್ಟ್ ಏರ್‌ಲೈನ್ಸ್ ತಿಳಿಸಿರುವುದಾಗಿ ವಿಮಾನಯಾನ ನಿಯಂತ್ರಕ ತಿಳಿಸಿದೆ. ದೆಹಲಿಯ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (NCLT) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಳಿಗಾಗಿ ಅರ್ಜಿ ಸಲ್ಲಿಕೆ ಮಾಡಿದೆ. ಏರ್‌ಲೈನ್‌ನ ಮುಖ್ಯಸ್ಥ ಕೌಶಿಕ್ ಖೋನಾ, ಪ್ರ್ಯಾಟ್ ಮತ್ತು ವಿಟ್ನಿ (P&W) ಇಂಜಿನ್‌ಗಳನ್ನು ಪೂರೈಸದ ಕಾರಣ ಏರ್‌ಲೈನ್ ತನ್ನ ಫ್ಲೀಟ್‌ನ ಅರ್ಧಕ್ಕಿಂತ ಹೆಚ್ಚು 28 ವಿಮಾನಗಳನ್ನು ರದ್ದು ಮಾಡಿದೆ ಎಂದು ಹೇಳಿದ್ದಾರೆ.

ಇದು ದುರದೃಷ್ಟಕರ ನಿರ್ಧಾರವಾಗಿದೆ (ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಳಿಗೆ ಸಲ್ಲಿಸುವುದು) ಆದರೆ ಕಂಪನಿಯ ಹಿತಾಸಕ್ತಿಗಳನ್ನು ರಕ್ಷಿಸಲು ಇದನ್ನು ಮಾಡಬೇಕಾಗಿದೆಎಂದು ಅವರು ಹೇಳಿದರು.

ಏರ್‌ಲೈನ್ಸ್ ಬೆಳವಣಿಗೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದೆ ಮತ್ತು ಡಿಜಿಸಿಎಗೆ ವಿವರವಾದ ವರದಿಯನ್ನು ಸಲ್ಲಿಸಲಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ವಾಡಿಯಾಸ್ ಒಡೆತನದ ಗೋ ಫರ್ಸ್ಟ್‌, ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿ) ಪಾವತಿಸಲು ಹಣದ ಕೊರತೆಯಿಂದಾಗಿ ತನ್ನ ವಿಮಾನಗಳನ್ನು ಸ್ಥಗಿತಗೊಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!