ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಚುನಾವಣಾ ಅಖಾಡದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪ್ರಚಾರ ಸಭೆಯಲ್ಲಿ ಜನರ ಉದ್ದೇಶಿಸಿ ಮಾತನಾಡಿದರು.
ಬಜರಂಗಬಲಿ ಕೀ ಜೈ (Jai Bajrangbali) ಎಂದುಭಾಷಣ ಆರಂಭಿಸಿದ ಮೋದಿ, ತುಳುವಿನಲ್ಲಿ ಮಾತನ್ನು ಆರಂಭಿಸಿದರು.
‘ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೇಗ್ ಸೊಲ್ಮೆಲು (ಪರಶುರಾಮ ಕ್ಷೇತ್ರದ ತಾಯಿಯ ಪ್ರೀತಿಯ ಮಕ್ಕಳಿಗೆ ನಮಸ್ಕಾರಗಳು) ಎಂದು ಹೇಳಿ ಭಾಷಣ ಆರಂಭಿಸಿದರು.
ಬಳಿಕ ಹಿಂದಿಯಲ್ಲೇ ಭಾಷಣ ಆರಂಭಿಸಿದ ಮೋದಿ ಪರುಶುರಾಮ ಕ್ಷೇತ್ರ, ಮೂಲ್ಕಿ ವೆಂಕಟರಣ ದೇವಸ್ಥಾನ, ನಾರಾಯಣ ಗುರು, ತೀರ್ಥಂಕರನ್ನು ಉಲ್ಲೇಖಿಸಿ ಭಾಷಣ ಮುಂದುವರಿಸಿದರು.
ಭಾಷಣದ ಕೊನೆಯಲ್ಲಿ ಎಲ್ಲರ ಜೊತೆ ಫ್ಲ್ಯಾಶ್ ಲೈಟ್ ಆನ್ ಮಾಡಲು ಹೇಳಿದ ಮೋದಿ ಪ್ರತಿ ಮನೆ ಮನೆಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಬೇಕು. ಈ ಮೂಲಕ ಮೋದಿಗೆ ಅಶೀರ್ವಾದ ಮಾಡಬೇಕೆಂದು ಎಂದು ಸಭಿಕರಲ್ಲಿ ಮನವಿ ಮಾಡಿಕೊಂಡರು.
ಕೊನೆಗೂ ಜೈ ಬಜರಂಗ ಬಲಿ ಘೋಷಣೆ ಬಳಿಕ ವಂದೇ ಮಾತರಂ ಘೋಷಣೆ ಕೂಗಿ ಮೋದಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.