ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಖನೌ ಹಾಗೂ ಚೆನ್ನೈ ನಡುವಿನ ಪಂದ್ಯಕ್ಕೆ ವರುಣನ ಆಗಮನವಾಗಿದೆ.
ಟಾಸ್ ವೇಳೆ ಮಳೆ ಸುರಿದ ಕಾರಣ ವಿಳಂಬವಾಗಿ ಪಂದ್ಯ ಆರಂಭಗೊಂಡಿತ್ತು. ಇದೀಗ 19.2 ಓವರ್ ಮುಕ್ತಾಯದ ವೇಳೆ ಮತ್ತೆ ಮಳೆ ಸುರಿದಿದೆ. ಅಂತಿಮ ಹಂತದಲ್ಲಿ ಆಯುಷ್ ಬದೋನಿ ಸ್ಪೋಟಕ ಬ್ಯಾಟಿಂಗ್ ಮೂಲಕ 59 ರನ್ ಸಿಡಿಸು ಮೂಲಕ ಲಖನೌ 7 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿದೆ. 19.2 ಓವರ್ ಮುಕ್ತಾಯದ ವೇಳೆ ಮಳೆ ಸುರಿದ ಕಾರಣ ಮತ್ತೆ ಪಂದ್ಯ ಸ್ಥಗಿತಗೊಂಡಿದೆ.
ತುಂತುರ ಮಳೆಯಿಂದ 3.30ಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯ 3.45ಕ್ಕೆ ಆರಂಭಗೊಂಡಿತು. ಟಾಸ್ ಸೋತು ಬ್ಯಾಟಿಂಗ್ ಇಳಿದ ಲಖನೌ ಸೂಪರ್ ಜೈಂಟ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು. ಕೈಲ್ ಮೇಯರ್ಸ್ 14 ರನ್ ಸಿಡಿಸಿ ಔಟಾದರು. ಇತ್ತ ಮನನ್ ವೋಹ್ರಾ 10 ರನ್ ಸಿಡಿಸಿ ನಿರ್ಗಮಿಸಿದರು. ಕರಣ್ ಶರ್ಮಾ ಕೇವಲ 9 ರನ್‌ಗೆ ಸುಸ್ತಾದರು. ಇತ್ತ ನಾಯಕ ಕ್ರುನಾಲ್ ಪಾಂಡ್ಯ ತನ್ನ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಖಾತೆ ತೆರೆಯುವ ಮುನ್ನವೇ ಕ್ರುನಾಲ್ ಪಾಂಡ್ಯ ವಿಕೆಟ್ ಕೈಚೆಲ್ಲಿದರು.
ಮಾರ್ಕಸ್ ಸ್ಟೋಯ್ನಿಸ್ 6 ರನ್ ಸಿಡಿಸಿ ಔಟಾದರು. ಆದರೆ ನಿಕೋಲಸ್ ಪೂರನ್ ಹಾಗೂ ಆಯುಷ್ ಬದೋನಿ ಹೋರಾಟದಿಂದ ಲಖನೌ ಲಕ್ ಬದಲಾಯಿತು.ಪೂರನ 20 ರನ್ ಸಿಡಿಸಿ ಔಟಾದರು. ಆದರೆ ಆಯುಷ್ ಬದೋನಿ ಸ್ಫೋಟಕ ಬ್ಯಾಟಿಂಗ್ ಮೂಲಕ ಹಾಫ್ ಸೆಂಚುರಿ ಸಿಡಿಸಿದರು. ಬದೋನಿ 33 ಎಸತದಲ್ಲಿ ಅಜೇಯ 59 ರನ್ ಸಿಡಿಸಿದರು. ಇದೇ ವೇಳೆ ಮಳೆ ಕಾರಣ ಪಂದ್ಯ ಸ್ಥಗಿತಗೊಂಡಿತು.