ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಅಮೃತವರ್ಷಿಣಿ (Amruthavarshini) ಜನಪ್ರಿಯ ನಟ ಶರತ್ ಬಾಬು (Sharath Babu) ಇಂದು (ಮೇ 3) ರಂದು ಹೈದರಾಬಾದ್ನಲ್ಲಿ ಕೊನೆ ಉಸಿರೆಳೆದಿದ್ದಾರೆ.
ಹಲವು ದಿನಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನ ಹೊಂದಿದ್ದಾರೆ.
ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟ ಶರತ್ ಬಾಬು ಅವರು ಅನಾರೋಗ್ಯದ ಕಾರಣ ಕಳೆದ ತಿಂಗಳು 20 ರಂದು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಲಿವರ್, ಕಿಡ್ನಿ, ಶ್ವಾಸಕೋಶಗಳಿಗೆ ತೊಂದರೆಯಾಗಿದ್ದು, ದೇಹದ ಅಂಗಾಂಗಗಳು ಉರಿಯೂತಕ್ಕೆ ತುತ್ತಾಗಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.