ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಈ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಕಲಬುರಗಿಯಲ್ಲಿ (Kalaburagi) ಭಾಗಿಯಾಗಬೇಕಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮ ರದ್ದಾಗಿದೆ.
ಕಲಬುರಗಿ ಕಾರ್ಯಕ್ರಮಕ್ಕೆ ಪಂಜಾಬ್ನಿಂದ ಹೊರಟಿದ್ದ ಅಮಿತ್ ಶಾ, ಮಾರ್ಗ ಮಧ್ಯದಲ್ಲೇ ನಿರ್ಧಾರ ಬದಲಾಯಿಸಿ ದೆಹಲಿಗೆ ತೆರಳಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿಯಲ್ಲಿ ಇಂದು ಅಮಿತ್ ಶಾ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಮಣಿಪುರದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಕಾರಣ ತುರ್ತಾಗಿ ಅವರು ದೆಹಲಿಗೆ ತೆರಳಿದ್ದಾರೆ.
ಮಣಿಪುರದಲ್ಲಿ ಬಹುಸಂಖ್ಯಾತ ‘ಮೈತೆ’ ಸಮುದಾಯವನ್ನು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸುವುದರ ವಿರುದ್ಧದ ಪ್ರತಿಭಟನೆ ತೀವ್ರಗೊಂಡಿದ್ದು, ಹಲವೆಡೆ ಹಿಂಸಾಚಾರ ಉಲ್ಬಣಿಸಿದೆ.