ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಶುರುವಾಗಿದೆ. ರಾಜ್ಯದಲ್ಲಿ ಮತದಾರರು ಎಷ್ಟಿದ್ದಾರೆ ಅಂಕಿ ಅಂಶಗಳು ಹೀಗಿವೆ.
ಕರ್ನಾಟಕದಲ್ಲಿ ಒಟ್ಟು 5,31,33,054 ಮತದಾರರಿದ್ದು, ಈ ಪೈಕಿ 2,67,28,053 ಪುರುಷರು, 2,64,00,074 ಮಹಿಳಾ ಹಾಗೂ 4,927 ಇತರೆ ಮತದಾರಿದ್ದಾರೆ.
ಹೊಸ ಮತದಾರರ ಸೇರ್ಪಡೆ :
ಈ ಬಾರಿ ಹೊಸದಾಗಿ 16,04,285 ಮತದಾರರು ಸೇರ್ಪಡೆಯಾಗಿದ್ದಾರೆ. ರಾಜ್ಯದಲ್ಲಿ 18 ರಿಂದ 19 ವಯಸ್ಸಿನ 11,71,558 ಯುವ ಮತದಾರರಿದ್ದು, ಯುವಕರು 645140, ಯುವತಿಯರು 526237, ಇತರೆ 181 ಮತದಾರರಿದ್ದಾರೆ.