ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ರಜನೀಕಾಂತ್ (Rajinikanth) ಪುತ್ರಿ ಐಶ್ವರ್ಯಾ ರಜನೀಕಾಂತ್ (Aishwarya Rajinikanth) ಕೆಲ ತಿಂಗಳ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲೇರಿ ತಮ್ಮ ಮನೆಯಲ್ಲಿ ಕೋಟ್ಯಂತರ ಮೌಲ್ಯದ ಆಭರಣ ಕಳುವಾದ ಬಗ್ಗೆ ದೂರು ದಾಖಲಿಸಿದ್ದರು. ಇದೀಗ ರಜನೀಕಾಂತ್ರ ಮತ್ತೊಬ್ಬ ಪುತ್ರಿ ಸೌಂದರ್ಯಾ ರಜನೀಕಾಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸೌಂದರ್ಯ ರಜನೀಕಾಂತ್ರ ಐಶಾರಾಮಿ, ದುಬಾರಿ ಕಾರಿನ ಕೀಲಿ ಕಾಣೆಯಾಗಿದೆಯಂತೆ. ಹೀಗೆಂದು ಸೌಂದರ್ಯ ರಜನೀಕಾಂತ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೌಂದರ್ಯಾ ಇತ್ತೀಚೆಗೆ ಮನೆಯಿಂದ ಖಾಸಗಿ ಕಾಲೇಜೊಂದಕ್ಕೆ ತೆರಳುವಾಗ ಅವರ ಕಾರಿನ ಕೀ ಕಾಣೆಯಾಗಿದೆಯಂತೆ. ಈ ಬಗ್ಗೆ ದೂರು ನೀಡಿರುವ ಸೌಂದರ್ಯಾ ಕೀ ಹುಡುಕಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಸುಮಾರು ಮೂರು ಕೋಟಿಗೂ ಹೆಚ್ಚಿನ ಬೆಲೆಯ ರೇಂಜ್ ರೋವರ್ ಕಾರಿನ ಕೀಲಿ ಕೈ ಸಹ ಬಹು ದುಬಾರಿ. ಕೀಲಿ ಕೈ ಸಿಕ್ಕಿದವರು ಕಾರು ಕಳವು ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅಲ್ಲದೆ, ಮತ್ತೊಂದು ಕೀಲಿ ಮಾಡಿಸಲು ಸಹ ಪೊಲೀಸ್ ದೂರು ಅವಶ್ಯಕ ಎನ್ನಲಾಗುತ್ತದೆ.