ಸಂಜೆಯ ಚಹಾ ಸಮಯದಲ್ಲಿ ಏನಾದರೂ ಕ್ರಂಚಿ, ಸುಲಭವಾಗಿ ಮಾಡಬಹುದಾದ ಸ್ನ್ಯಾಕ್ ಬೇಕಾದ್ರೆ ಕಾರ್ನ್ ರೋಲ್ ಒಳ್ಳೆಯ ಆಯ್ಕೆ. ಮಕ್ಕಳು ಮಾತ್ರವಲ್ಲ, ದೊಡ್ಡವರಿಗೂ ಇಷ್ಟವಾಗುವ ಈ ರೋಲ್ ಹೊರಗಿನಿಂದ ಕ್ರಿಸ್ಪಿಯಾಗಿ, ಒಳಗಿನಿಂದ ಸಾಫ್ಟ್ ಹಾಗೂ ಅದ್ಭುತ ರುಚಿಯನ್ನು ಕೊಡುತ್ತದೆ. ಕಡಿಮೆ ಸಾಮಗ್ರಿಗಳಲ್ಲಿ, ಕಡಿಮೆ ಸಮಯದಲ್ಲಿ ತಯಾರಾಗುವ ಈ ಕಾರ್ನ್ ರೋಲ್ ಮನೆಲ್ಲೇ ಹೋಟೆಲ್ ಸ್ಟೈಲ್ ಸ್ನ್ಯಾಕ್ ಅನುಭವ ನೀಡುತ್ತದೆ.
ಬೇಕಾಗುವ ಸಾಮಗ್ರಿಗಳು
ಸ್ವೀಟ್ ಕಾರ್ನ್ – 1 ಕಪ್
ಈರುಳ್ಳಿ – 1 ಸಣ್ಣದು
ಕ್ಯಾಪ್ಸಿಕಂ – 2 ಟೇಬಲ್ ಸ್ಪೂನ್
ಹಸಿಮೆಣಸು – 1
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – ½ ಟೀ ಸ್ಪೂನ್
ಮೆಣಸಿನ ಪುಡಿ – ½ ಟೀ ಸ್ಪೂನ್
ಗರಂ ಮಸಾಲಾ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮೈದಾ ಅಥವಾ ಕಾರ್ನ್ ಫ್ಲೋರ್ – 2 ಟೇಬಲ್ ಸ್ಪೂನ್
ಬ್ರೆಡ್ ಸ್ಲೈಸ್ / ರೋಲ್ ಶೀಟ್ – ಅಗತ್ಯವಷ್ಟು
ಎಣ್ಣೆ – ಕರಿಯಲು
ತಯಾರಿಸುವ ವಿಧಾನ
ಮೊದಲು ಬೇಯಿಸಿದ ಕಾರ್ನ್ ಅನ್ನು ಸ್ವಲ್ಪ ಮ್ಯಾಶ್ ಮಾಡಿ. ಅದಕ್ಕೆ ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಗರಂ ಮಸಾಲಾ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಮಿಶ್ರಣವನ್ನು ಬಿಗಿಯಾಗಿಸಲು ಮೈದಾ ಅಥವಾ ಕಾರ್ನ್ ಫ್ಲೋರ್ ಸೇರಿಸಿ. ಈಗ ಬ್ರೆಡ್ ಸ್ಲೈಸ್ ಅಂಚುಗಳನ್ನು ಕತ್ತರಿಸಿ ರೋಲ್ ಶೀಟ್‌ನಂತೆ ಮಾಡಿ, ಮಧ್ಯದಲ್ಲಿ ಕಾರ್ನ್ ಮಿಶ್ರಣ ಇಟ್ಟು ರೋಲ್ ಮಾಡಿ. ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಿರಿ.

