ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತದಾನದ ನಂತರ ಬಂದ ಸಮೀಕ್ಷೆಯ ಪ್ರಕಾರ ಈ ಬಾರಿ ಕಾಂಗ್ರೆಸ್ಗೆ ಸರ್ಕಾರ ರಚಿಸುವ ಚಾನ್ಸ್ ಸಿಗಬಹುದು, ಇನ್ನೂ ಕೆಲವು ಸಮೀಕ್ಷೆಗಳ ಪ್ರಕಾರ, ಈ ಬಾರಿ ಅತಂತ್ರ ವಿಧಾನಸಭೆ ಸಾಧ್ಯತೆ ಇದೆ.
ಅತಂತ್ರ ವಿಧಾನಸಭೆ ಆಗಿದ್ದೇ ಆದಲ್ಲಿ, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಜೆಡಿಎಸ್ ಬಳಿ ಮೈತ್ರಿಗಾಗಿ ಹಸ್ತ ಚಾಚಲೇಬೇಕಿದೆ. ಜೆಡಿಎಸ್ ನಿರ್ಣಾಯಕ ಘಟ್ಟದಲ್ಲಿ ಇದೆ, ಜೆಡಿಎಸ್ ಕಿಂಗ್ ಮೇಕರ್ ಆದರೂ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಕಳೆದ ಬಾರಿ ಬಂದಷ್ಟು ಮತಗಳು ಜೆಡಿಎಸ್ಗೆ ಈ ಬಾರಿ ಬರೋ ಸಾಧ್ಯತೆ ತೀರಾ ಕಡಿಮೆ ಇದೆ, ಆದರೂ ಜೆಡಿಎಸ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಜವಾಗಿಯೂ ಜೆಡಿಎಸ್ ಕಿಂಗ್ ಮೇಕರ್ ಆಗುತ್ತದಾ? ಅಥವಾ ಕಾಂಗ್ರೆಸ್, ಬಿಜೆಪಿ ಹೆಚ್ಚು ಸ್ಥಾನ ಗೆದ್ದು ಸರ್ಕಾರ ರಚಿಸುತ್ತವಾ? ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ.