ಹೊಸದಿಗಂತ ವರದಿ ಧಾರವಾಡ:
ಕಲಘಟಗಿ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ಕಲಘಟಗಿ ಕ್ಷೇತ್ರದ ಐದು ಸುತ್ತಿನ ಮತ ಎಣಿಕೆ ಮುಗಿದಿದ್ದು, ಸಂತೋಷ ಲಾಡ್ 28,164, ನಾಗರಾಜ ಛಬ್ಬಿ 21,687 ಮತ ಪಡೆದಿದ್ದು ಲಾಡ್ 6,477 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಹಾಗೆಯೇ ಧಾರವಾಡ ಗ್ರಾಮೀಣ ಕ್ಷೇತ್ರದ ನಾಲ್ಕು ಸುತ್ತಿನ ಮತ ಎಣಿಕೆ ಮುಗಿದಿದೆ. ಕಾಂಗ್ರೆಸ್ ನ ವಿನಯ್ ಕುಲಕರ್ಣಿ 21,135 ಬಿಜೆಪಿ ಅಮೃತ ದೇಸಾಯಿ 16,687 ಪಡೆದಿದ್ದು ವಿನಯ್ 5,448 ಮತಗಳ ಮುನ್ನಡೆ ಸಾಧಿಸುದ್ದಾರೆ.