ಹೊಸದಿಗಂತ ವರದಿ ಧಾರವಾಡ:
ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಗೆಲವಿನ ಹೊಸ್ತಿಲಲ್ಲಿ ನಿಂತಿದ್ದಾರೆ.
ಈವರೆಗೂ ಒಟ್ಟು 16 ಸುತ್ತಿನ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ವಿನಯ್ ಕುಲಕರ್ಣಿ 17,157 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ. ಕೇವಲ ಒಂದು ಸುತ್ತಿನ ಮತ ಎಣಿಕೆ ಬಾಕಿ ಇದ್ದು, ಬಹುತೇಕ ವಿನಯ್ ಗೆಲವು ಖಚಿತವಾಗಿದೆ.
ವಿನಯ್ ಕುಲಕರ್ಣಿ ಒಟ್ಟು 75,015 ಮತ ಪಡೆದರೆ, ಬಿಜೆಪಿಯ ಪ್ರತಿಸ್ಪರ್ಧಿ 67,858 ಮತ ಪಡೆದ್ದಾರೆ. ವಿನಯ್ ಅವರು 17,157 ಮತದ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.