ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಕ್ಯೂಟೆಸ್ಟ್ ಜೋಡಿಗಳಲ್ಲಿ ಒಂದಾದ ವಿಕ್ಕಿ ಕೌಶಲ್ ಹಾಗೂ ಕಟ್ರೀನಾ ಕೈಫ್ ಜೋಡಿ ದಾಂಪತ್ಯದಲ್ಲಿ ಬಿರುಕು ಮೂಡಿದ್ಯಾ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಝರಾ ಬಚ್ಕೆ, ಝರಾ ಹಟ್ಕೆ ಸಿನಿಮಾ ಪ್ರಮೋಷನ್ಸ್‌ನ ವೇಳೆ ನಡೆದ ಸಂದರ್ಶನದಿಂದ ಈ ರೂಮರ್ ಶುರುವಾಗಿದೆ. ಕಟ್ರೀನಾಗಿಂತ ಒಳ್ಳೆ ಹುಡುಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕರೆ ಕಟ್ರೀನಾಗೆ ಡಿವೋರ್ಸ್ ಕೊಟು ಅವಳನ್ನು ಮದುವೆಯಾಗ್ತೀರಾ ಎನ್ನುವ ಪ್ರಶ್ನೆ ವಿಕ್ಕಿಗೆ ಎದುರಾಗಿದೆ.
ಸಾರಾ ಅಲಿ ಖಾನ್ ಹಾಗೂ ವಿಕ್ಕಿ ಕೌಶಲ್ ಗಾಬರಿಯಾಗಿದ್ದು, ನಂತರ ನಕ್ಕಿದ್ದಾರೆ. ನಾನು ಸಂಜೆ ಮನೆಗೆ ಹೋಗಬೇಕು, ಈ ರೀತಿ ಪ್ರಶ್ನೆ ಕೇಳಿದ್ರೆ ಹೇಗೆ? ನಾನಿನ್ನೂ ಬಾಲಿವುಡ್‌ನಲ್ಲಿ ಸಣ್ಣವನು, ಇಂಥ ಪ್ರಶ್ನೆ ಕೇಳಿ ಭಯ ಬೀಳಿಸಬೇಡಿ, ಈಗಲ್ಲಾ ಎಷ್ಟು ಜನ್ಮ ಆದರೂ ಕಟ್ರೀನಾ ನನ್ನ ಪತ್ನಿ, ಅವರನ್ನು ತುಂಬಾ ಪ್ರೀತಿಸ್ತೇನೆ ಎಂದು ವಿಕ್ಕಿ ಹೇಳಿದ್ದಾರೆ.